ಮಂಗಳೂರು: ಉರುಮಾಲ್ ಮಾಸ ಪತ್ರಿಕೆಯ 18ನೇ ವಾರ್ಷಿಕೋತ್ಸವ ಪ್ರಯುಕ್ತ ಸೆ.18ರಂದು ಸುರತ್ಕಲ್ ಮಂಗಳಪೇಟೆಯ ಪತ್ರಿಕಾ ಕಚೇರಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪತ್ರಿಕೆಯ ವ್ಯವಸ್ಥಾಪಕ ಎಂ.ಎ.ಶರ್ಫರಾಜ್ ನವಾಜ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ನಾಲ್ಕು ಜೋಡಿಗಳ ವಿವಾಹ ನಡೆಯಲಿದೆ. ಉಡುಪಿ ಜಿಲ್ಲಾ ಸಂಯುಕ್ತ ಖಾಜಿ ಶೈಖುನಾ ಜೈನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವದಲ್ಲಿ ನಡೆಯುವ ವಿವಾಹದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಸಯ್ಯದ್ ಅಬ್ದುರ್ರಹಮಾನ್ ಸಾದತ್ ತಂಙಳ್ ದುಆ ನೆರವೇರಿಸುವರು. ಮಂಗಳಪೇಟೆ ಮುಹಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎ. ಹಸನಬ್ಬ ಅಧ್ಯಕ್ಷತೆ ವಹಿಸುವರು. ಸ್ಥಳೀಯ ಖತೀಬ ಶಫೀಕ್ ಸಖಾಫಿ ಉದ್ಘಾಟಿಸುವರು. ಶಾಸಕರಾದ ಯು.ಟಿ.ಖಾದರ್, ಬಿ.ಎಂ.ಫಾರೂಕ್, ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ರಮಾನಾಥ ರೈ, ಕೆ.ಅಭಯಚಂದ್ರ ಜೈನ್ ಭಾಗವಹಿಸುವರು ಎಂದರು. ಪತ್ರಿಕೆ ಸಂಪಾದಕ ಎಂ.ಎಚ್.ಹಸನ್ ಝಹರಿ, ಸಿಬ್ಬಂದಿ ತೌಸೀಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.