ಮಂಗಳೂರು: ‘ವಿಧಾನಸಭಾ ಕಾರ್ಯಾಲಯದ ಮೂಲಕ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾರಿಗಾದರೂ ಸಂಶಯವಿದ್ದರೆ, ಮಾಹಿತಿ ಕೇಳುವುದಿದ್ದರೆ, ಏನಾದರೂ ಹೇಳುವುದಿದ್ದರೆ ನಾಳೆ (ಗುರುವಾರ) ಬೆಂಗಳೂರಿನಲ್ಲಿ ಲಭ್ಯ ಇದ್ದೇನೆ. ಕಚೇರಿಗೆ ಬಂದು ಲಿಖಿತವಾಗಿ ದೂರು ಸಲ್ಲಿಸಲಿ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ವಿಧಾನಸಭೆಯ ಮಾಜಿ ಅಧ್ಯಕ್ಷರೂ ಆಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭಾ ಕಾರ್ಯಾಲಯದ ಬಗ್ಗೆ ಮಾಡಿರುವ ಆರೋಪಗಳಿಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಕಾಗೇರಿ ಅವರೂ ರಾಜಕೀಯ ವ್ಯಕ್ತಿ. ಶಾಸಕ, ಸಂಸದರಾಗಿ ಗೌರವಯುತ ಸ್ಥಾನದಲ್ಲಿದ್ದವರು. ಅವರ ಆಲೋಚನೆಗಳನ್ನು ನಾನು ಗೌರವಿಸುತ್ತೇನೆ. ಅವರ ಆರೋಪಗಳನ್ನು ಗಮನಿಸಿದ್ದೇನೆ. ಅವರು ಎಲ್ಲೋ ಕುಳಿತು ಮಾತನಾಡಿದಂತೆ, ನನಗೆ ಮಾತನಾಡಲು ಆಗುವುದಿಲ್ಲ. ಅವರು ಹೇಳಬೇಕಾದ ವಿಚಾರಗಳನ್ನು ಲಿಖಿತವಾಗಿ ನೀಡಿದರೆ, ಅದರಲ್ಲಿ ಏನಿದೆ ಪರಿಶೀಲಿಸುತ್ತೇನೆ. ಅದರಂತೆ ವಿಧಾನಸಭೆ ಗೌರವ ಹೆಚ್ಚು ಮಾಡಲು ಕ್ರಮ ವಹಿಸುತ್ತೇನೆ. ಈ ಕುರಿತ ಸಕಾರಾತ್ಮಕ ಚರ್ಚೆಗೆ ಸಿದ್ಧ’ ಎಂದರು.

‘ಕರ್ನಾಟಕ ವಿಧಾನಸಭೆಗೆ ಈಗ ರಾಜ್ಯ ಮತ್ತು ದೇಶದಲ್ಲಿ ಮಾತ್ರವಲ್ಲ ಅಂತರರಾಷ್ಟ್ರಿಯ ಮಟ್ಟದಲ್ಲೂ ಗೌರವ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಅದಕ್ಕೆ ದೃಷ್ಟಿ ಬೀಳಬಾರದು ಎಂದು ಅವರು ಆರೋಪ ಮಾಡಿದ್ದಾರೆ. ಎಲ್ಲ ರೋಗಕ್ಕೆ ಮದ್ದು ಇದೆ. ಅಸೂಯೆಗೆ ಮದ್ದಿಲ್ಲ. ಹೊಸತಾಗಿ ಮನೆ ನಿರ್ಮಿಸುವವರು ಕಟ್ಟಡಕ್ಕೆ ದೃಷ್ಟಿ ಬೀಳಬಾರದು ಎಂದು ದೃಷ್ಟಿಬೊಂಬೆ ಕಟ್ಟುತ್ತಾರೆ. ಅವರ ಆರೋಪ ಕಟ್ಟಡದ ದೃಷ್ಟಿಬೊಂಬೆ ಇದ್ದಂತೆ’ ಎಂದರು.

‘ರಾಜಕೀಯವಾಗಿ ಹೇಳುವುದಕ್ಕೆ ನನಗೂ ಬಹಳಷ್ಟು ವಿಚಾರಗಳಿವೆ. ರಾಜಕೀಯವಾಗಿ ಅವರು ಮಾತನಾಡಬಹುದು. ಆದರೆ ನಾನು ಸಂವಿಧಾನಬದ್ಧ ಹುದ್ದೆಯಲ್ಲಿದ್ದೇನೆ. ನಾನೀಗ ಪ್ರತಿಪಕ್ಷದ ಮಿತ್ರ’ ಎಂದರು.

‘ವಿಧಾನಸಭೆಯ ಶಾಸಕರ ಲಾಂಜ್ ಮಸಾಜ್ ಪಾರ್ಲರ್ನಂತಾಗಿದೆ’ ಎಂದು ಶಾಸಕರ ಡಾ.ವೈ.ಭರತ್ ಶೆಟ್ಟಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ‘ಶಾಸಕರಿಗೆ ಏನೆಲ್ಲ ಸವಲತ್ತು ಕೊಡಬೇಕು ಅದನ್ನು ಮುಂದೆಯೂ ನೀಡುತ್ತೇನೆ. ಅವರು ಇಲ್ಲಿ ಒಂದು ರೀತಿ ಹೇಳಿಕೆ ನೀಡುತ್ತಾರೆ. ಅಲ್ಲಿ ಒಂದು ರೀತಿ ಹೇಳುತ್ತಾರೆ’ ಎಂದರು.

‘ಆರೋಪ ಮಾಡಿ ನನಗೆ ಹಾನಿ ಮಾಡುವುದರಿಂದ ಸಂತೋಷ ಸಿಗುವುದಾದರೆ ದಿನಕ್ಕೊಂದು ಆರೋಪ ಮಾಡಲಿ. ನನಗೆ ಬೇಸರ ಇಲ್ಲ. ಇಂತಹ ಆರೋಪ ನನಗೆ ಇದು ಮೊದಲೇನಲ್ಲ. ರಾಜಕೀಯ ಜೀವನದ ಉದ್ದಕ್ಕೂ ಇಂತಹ ಆರೋಪಗಳನ್ನು ಸಾಕಷ್ಟು ಕೇಳಿದ್ದೇನೆ. ನನ್ನ ಕ್ಷೇತ್ರದ ಜನ ನನ್ನನ್ನು ಇನ್ನಷ್ಟು ಮುಂದಕ್ಕೆ ಕರೆದೊಯ್ಯುತ್ತಾರೆ’ ಎಂದರು.

ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ವರು, ‘ಆಲೋಚನೆ ಮಾಡಿ ನಾಳೆ ಹೇಳುತ್ತೇನೆ’ ಎಂದರು.

‘ನನಗೆ ಹೊಸ ಜವಾಬ್ದಾರಿ ನೀಡುವ ವಿಚಾರ ನನಗೆ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.