ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಟೊಮೆಟೊ, ಈರುಳ್ಳಿ ದರ ಏರಿಕೆ

ತಗ್ಗಿದ ಕಾಯಿಪಲ್ಲೆ ಬೆಲೆ, ಹಣ್ಣಿನ ದರ ಸ್ಥಿರ, ನುಗ್ಗೆ ಕೆ.ಜಿ.ಗೆ. 160
Published : 24 ಸೆಪ್ಟೆಂಬರ್ 2024, 14:09 IST
Last Updated : 24 ಸೆಪ್ಟೆಂಬರ್ 2024, 14:09 IST
ಫಾಲೋ ಮಾಡಿ
Comments

ಮಂಗಳೂರು: ಕಳೆದ ವಾರಕ್ಕೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳ ಬೆಲೆ ತಗ್ಗಿದ್ದು, ಟೊಮೆಟೊ, ಬೆಳ್ಳುಳ್ಳಿ, ಈರುಳ್ಳಿ ದರ ಮಾತ್ರ ಏರುಗತಿಯಲ್ಲಿ ಸಾಗಿದೆ. ಹಣ್ಣುಗಳ ದರವೂ ಇದೇ ಪಥದಲ್ಲಿ ಸಾಗಿದೆ.

ಜಿಲ್ಲೆಯಲ್ಲಿ ತರಕಾರಿ ಬೆಳೆ ಅತಿ ಕಡಿಮೆ. ಹೊರ ಜಿಲ್ಲೆಗಳನ್ನೇ ಅವಲಂಬಿಸಿರುವ ಇಲ್ಲಿ, ತರಕಾರಿ ಬೆಲೆ ಉಳಿದ ಕಡೆಗಳಿಗಿಂತ ತುಸು ಹೆಚ್ಚೇ ಇರುತ್ತದೆ. ನಾಗರ ಪಂಚಮಿ, ಗಣೇಶ ಚತುರ್ಥಿ ಹಬ್ಬಗಳ ವೇಳೆಗೆ ಹೋಲಿಸಿದರೆ ಈಗ ತರಕಾರಿ ಬೆಲೆ ಇಳಿಕೆಯಾಗಿದೆ. ಎನ್ನುತ್ತಾರೆ ವ್ಯಾಪಾರಿಗಳು.

ಎರಡು ದಿನಗಳ ಈಚೆಗೆ ಟೊಮೆಟೊ ಮತ್ತು ಈರುಳ್ಳಿ ದರ ಹೆಚ್ಚಾಗಿದೆ. ಆದರೆ, ಮಂಗಳೂರು ದಸರಾ ವಿಶೇಷ. ದಸರಾ ಬಂದರೆ ಮತ್ತೆ ತರಕಾರಿ ಬೇಡಿಕೆ ಹೆಚ್ಚಾಗಿ, ದರ ವ್ಯತ್ಯಾಸವಾಗಬಹುದು. ಹಣ್ಣಿನ ದರ ಇಳಿಕೆ ಆಗಿಲ್ಲ, ಯಥಾಸ್ಥಿತಿಯಲ್ಲಿದೆ. ಕದಳಿ ಗುಣಮಟ್ಟದ ಹಣ್ಣಿಗೆ ಈಗಲೂ ಕೆ.ಜಿ.ಗೆ ₹110 ದರ ಇದೆ ಎನ್ನುತ್ತಾರೆ ಕದ್ರಿಯ ತರಕಾರಿ ವ್ಯಾಪಾರಿ ಅಭಿಲಾಷ್.

100 ಗ್ರಾಂಗೆ ₹30ರ ಆಸುಪಾಸಿನಲ್ಲಿದ್ದ ಬೆಳ್ಳುಳ್ಳಿ ಬೆಲೆ ಈಗ ₹40ಕ್ಕೆ ತಲುಪಿದೆ. ಕೆ.ಜಿ.ಗೆ ₹30ರ ಆಸುಪಾಸಿನಲ್ಲಿದ್ದ ಟೊಮೆಟೊ ಈಗ ₹45ರಿಂದ ₹48ಕ್ಕೆ ಮಾರಾಟವಾಗುತ್ತಿದೆ. ಉಳಿದಂತೆ, ನವಿಲುಕೋಸು, ಹೀರೆಕಾಯಿ, ಪಡುವಲಕಾಯಿ, ಕ್ಯಾರೆಟ್, ತೊಂಡೆಕಾಯಿ, ಆಲೂಗಡ್ಡೆ, ಸಾಂಬಾರು ಸೌತೆ ದರ ಸ್ವಲ್ಪ ಇಳಿಮುಖವಾಗಿದೆ. ಇರುವ ತರಕಾರಿಗಳಲ್ಲಿ ಕ್ಯಾಬೀಜ್, ಸಾಂಬಾರು ಸೌತೆ ದರ ಅತಿ ಕಡಿಮೆ ಇದೆ. ನುಗ್ಗೆಕಾಯಿ ಕೆ.ಜಿ.ಗೆ. ₹160ರಂತೆ ಮಾರಾಟವಾಗುತ್ತಿದೆ. ಲಿಂಬು 100 ಗ್ರಾಂಗೆ ₹20 ದರವಿದೆ.

ಸೂಪರ್ ಮಾರ್ಕೆಟ್‌ಗಳಲ್ಲಿ ನಾನಾ ವಿಧದ ಆ್ಯಪಲ್‌ಗಳು ಇದ್ದು, ಕೆ.ಜಿ.ಯೊಂದಕ್ಕೆ ₹165ರಿಂದ ₹230ರವರೆಗೆ ದರ ಇದೆ. ರಂಬುಟಾನ್ ಹಂಗಾಮು ಮುಕ್ತಾಯದ ಹಂತದಲ್ಲಿದ್ದು ಕೆ.ಜಿ.ಯೊಂದಕ್ಕೆ ₹480ರಿಂದ ₹500ಕ್ಕೆ ಮಾರಾಟವಾಗುತ್ತಿದೆ.

ತರಕಾರಿ ಬೆಲೆ (ಕೆ.ಜಿ.ಗೆ. ₹ಗಳಲ್ಲಿ)

ಈರುಳ್ಳಿ;60–65

ಆಲೂಗಡ್ಡೆ;40–45

ಮೂಲಂಗಿ;40–45

ಟೊಮೆಟೊ;45–50

ಬದನೆ;40–45

ಉದ್ದ ಬೀನ್ಸ್;40–45

ಬೀನ್ಸ್;65–70

ನವಿಲುಕೋಸು;55–60

ಹೀರೆಕಾಯಿ;50–60

ಬೆಂಡೆಕಾಯಿ;50–60

ಹಾಗಲಕಾಯಿ (ಊರು);75–80

ಪಡುವಲಕಾಯಿ;45–50

ಹಸಿಮೆಣಸು;75–80

ಹಣ್ಣಿನ ದರ (ಕೆ.ಜಿ.ಗೆ. ₹ಗಳಲ್ಲಿ)

ಫ್ಯೂಜಿ ಸೇಬು;320–330

ಸೇಬು ಇಂಡಿಯನ್;230–240

ಕೆಂಪು ಸೇಬು;270–280

ಸೇಬು ರಾಯಲ್;200–210

ಸೇಬು ಡೆಲಿಷಿಯಸ್;170–180

ಶಿಮ್ಲಾ ಸೇಬು;160–170

ದಾಳಿಂಬೆ;290–300

ಕಿತ್ತಳೆ;90–100

ಕದಳಿ;100–110

ರೊಬಸ್ಟಾ;50–55

ಚಿಕ್ಕು;100–110

ಪಪ್ಪಾಯ;50–60

ಕಲ್ಲಂಗಡಿ;40–45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT