ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿ, ಮದರಸಾಗಳಲ್ಲಿ ಪರಿಶೀಲಿಸಿ: ಶರಣ್‌ ಪಂಪ್‌ವೆಲ್‌

ಬಾಂಬ್‌ ಸ್ಫೋಟ ಪ್ರಕರಣದ ತನಿಖೆ–ವಿಎಚ್‌ಪಿ ಆಗ್ರಹ
Published 11 ಮಾರ್ಚ್ 2024, 5:55 IST
Last Updated 11 ಮಾರ್ಚ್ 2024, 5:55 IST
ಅಕ್ಷರ ಗಾತ್ರ

ಮಂಗಳೂರು:‌ ‘ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಪೊಲೀಸ್‌ ಅಧಿಕಾರಿಗಳು ರಾಜ್ಯದ ಮದರಸಾ ಹಾಗೂ ಮಸೀದಿಗಳ ಒಳಗೆ ಹೋಗಿ ಪರಿಶೀಲನೆ ನಡೆಸಿದರೆ ಬೆಂಗಳೂರಿನ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಈಚೆಗೆ ನಡೆದ ಬಾಂಬ್‌ ಸ್ಫೋಟದ ಆರೋಪಿಯನ್ನು ಪತ್ತೆ ಹಚ್ಚಬಹುದು’ ಎಂದು ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಮದರಸಾಗಳು ಭಯೋತ್ಪಾದಕರ ತಾಣವಾಗುತ್ತಿವೆ. ಭಯೋತ್ಪಾದರಿಗೆ ಶಿಕ್ಷಣ ಕೊಡುವ ವ್ಯವಸ್ಥೆಯನ್ನು ಅಲ್ಲಿನ ಮೌಲ್ವಿಗಳು ಮಾಡುತ್ತಿದ್ದಾರೆ’ ಎಂದು ಆರೋಪಿದರು.

‘ಆರೋಪಿ ನಮಾಜ್‌ ಮಾಡಿ ಬಟ್ಟೆ ಬದಲಾಯಿಸಿದ್ದಾನೆ. ಬಳ್ಳಾರಿಯಲ್ಲಿ ಓಡಾಟ ಮಾಡಿದ್ದಾನೆ. ಭಟ್ಕಳಕ್ಕೆ ತೆರಳಿದ್ದಾನೆ ಎಂಬ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ಕೊಟ್ಟಿದ್ದಾರೆ. ಆದರೂ ಆರೋಪಿಯನ್ನು ಪತ್ತೆ ಹಚ್ಚಲು ಆಗುತ್ತಿಲ್ಲ. ಪೊಲೀಸ್‌ ಅಧಿಕಾರಿಗಳು ಹಾಗೂ ಎನ್‌ಐಎ ಅಧಿಕಾರಿಗಳಿಗೆ ನೆರವಾಗಲು ನಾವು ಸಿದ್ಧ. ಎನ್‌ಐಎ ಬಿಡುಗಡೆ ಮಾಡಿರುವ ಆರೋಪಿಯ ಫೋಟೊವನ್ನು ವಿಎಚ್‌ಪಿಯ ಟ್ವಿಟರ್‌ ಫೇಸ್‌ಬುಕ್‌ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಈ ಚಹರೆಯ ವ್ಯಕ್ತಿ ಕಂಡು ಬಂದರೆ, ಪೊಲೀಸರಿಗೆ ಅಥವಾ ಎನ್‌ಐಎಗೆ ಮಾಹಿತಿ ತಿಳಿಸುವಂತೆ ಸೂಚಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT