ಇಂತಹ ಮಕ್ಕಳ ಬಗ್ಗೆ ತಿಳಿದವರೇ ಇಲ್ಲಿರುವುದರಿಂದ ಭಿನ್ನ ಸಾಮರ್ಥ್ಯದ ಮಕ್ಕಳು ಇಲ್ಲಿನ ಚಟುವಟಿಕೆಗಳಲ್ಲಿ ಅಳುಕಿಲ್ಲದೇ ಭಾಗವಹಿಸಬಹುದು. ಬೇರೆ ಮೇಳಗಳಲ್ಲಿ ಇಷ್ಟು ಮುಕ್ತವಾಗಿರಲು ಸಾಧ್ಯವಿಲ್ಲ
–ಆನಂದ ಡಿ., ಭಿನ್ನಸಾಮರ್ಥ್ಯದ ಮಗುವಿನ ಪೋಷಕ ಶಕ್ತಿನಗರ
ಕುದುರೆ ಹಾಗೂ ಒಂಟೆಯಲ್ಲಿ ಮೊದಲ ಸಲ ಕುಳಿತೆ. ಜಾಯಿಂಟ್ ವ್ಹೀಲ್‌ನಲ್ಲಿ ಕುಳಿತ ಹಾಗೂ ಜೋಕಾಲಿ ಆಡಿದ ಖುಷಿ ಮರೆಯುವಂತಿಲ್ಲ. ಮುಂದಿನ ವರ್ಷವೂ ಈ ಮೇಳಕ್ಕೆ ಬರುತ್ತೇನೆ
–ಮೊಹಮ್ಮದ್ ಸಫ್ವಾನ್, ಪಂಪ್‌ವೆಲ್
ಒಂಟೆ ಹಾಗೂ ಕುದುರೆ ಸವಾರಿ ಮಾಡಿದ್ದು ತುಂಭಾ ಖುಷಿಕೊಟ್ಟಿತು. ಇಲ್ಲಿ ಹಮ್ಮಿಕೊಂಡಿದ್ದ ಅನೇಕ ಆಟಗಳಲ್ಲಿ ಭಾಗವಹಿಸಿದೆ. ಬಿಸಿ ಬಿಸಿ ಪೋಡಿ ಇಷ್ಟವಾಯಿತು. ಈ ಹಿಂದಿನ ವರ್ಷವೂ ಈ ಮೇಳದಲ್ಲಿ ಭಾಗವಹಿಸಿದ್ದೆ.