ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರ್ಲರ ಬರವಣಿಗೆಯಲ್ಲಿ ಶಿಸ್ತು: ಪ್ರೊ.ಪಿ.ಎಸ್.ಯಡಪಡಿತ್ತಾಯ

‘ವಿಷ್ಣುಮಂಗಲ’ ಬಿಡುಗಡೆಗೊಳಿಸಿದ ಪ್ರೊ.ಪಿ.ಎಸ್.ಯಡಪಡಿತ್ತಾಯ
Last Updated 8 ನವೆಂಬರ್ 2022, 7:31 IST
ಅಕ್ಷರ ಗಾತ್ರ

ಮಂಗಳೂರು: ‘ಚಿಂತನೆಯ ಹರವು ವಿಸ್ತರಿಸುವ ವಿಚಾರಗಳು ವಸಂತಕುಮಾರ್ ಪೆರ್ಲ ಅವರ ಬರಹಗಳ ವಿಶೇಷತೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ವಸಂತಕುಮಾರ್ ಪೆರ್ಲ ಅವರ ಮೂಲ ಕನ್ನಡ ಕಥೆಗಳ ಇಂಗ್ಲಿಷ್ ಅನುವಾದ ಕೃತಿ ‘ವಿಷ್ಣುಮಂಗಲ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ಪೆರ್ಲ ಅವರ ಬರವಣಿಗೆಯಲ್ಲಿ ಶಿಸ್ತು ಇದೆ. ಅವರ ಬರಹಗಳು ಓದುಗನಲ್ಲಿ ಸಕಾರಾತ್ಮಕ ಭಾವಗಳನ್ನು ಮೂಡಿಸುತ್ತವೆ’ ಎಂದರು.

ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಯುವ ಜನತೆ ಓದಿನತ್ತ ಆಕರ್ಷಿತರಾಗುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವ ಖುಷಿ ಅನನ್ಯ. ಆ ಖುಷಿಯನ್ನು ಯುವಜನರು ಅನುಭವಿಸಬೇಕು. ವಸಂತ ಕುಮಾರ್ ಪೆರ್ಲ ಅವರ ಕನ್ನಡ ಕಥೆಗಳನ್ನು 100ರ ಹರೆಯದಲ್ಲಿರುವ ಬಿ.ಆರ್.ಭೀಮಾಚಾರ್ ಭಾಷಾಂತರ ಮಾಡಿದ್ದಾರೆ ಎಂದು ಹೇಳಿದರು.

ಕೃತಿಕಾರ ಡಾ.ವಸಂತಕುಮಾರ್ ಪೆರ್ಲ ಮಾತನಾಡಿ, ‘ವಿಷ್ಣು ಮಂಗಲ ಎಂಬುದು ಆಧುನಿಕತೆಯತ್ತ ಮುಖ ಮಾಡಿದ ಸ್ವಾತಂತ್ರ್ಯಾನಂತರದ ಭಾರತದ ಹಳ್ಳಿಯೊಂದರ ಪ್ರತಿರೂಪ. ಹಳ್ಳಿಗಳಲ್ಲಿ ನಡೆಯುವ ವ್ಯವಹಾರಗಳು ಸಂಕೀರ್ಣವಾದ ಮನುಷ್ಯ ಸಂಬಂಧಗಳ ಮೂಲಕ ಕಲಾತ್ಮಕ ಕಥೆಗಳಾಗಿ ರೂಪ ತಾಳಿವೆ ಎಂದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT