ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ಅಂಚೆ ಮೂಲಕ ಮನೆ ಬಾಗಿಲಿಗೆ ಮದುವೆ ಪ್ರಮಾಣಪತ್ರ

Published 27 ಏಪ್ರಿಲ್ 2023, 7:07 IST
Last Updated 27 ಏಪ್ರಿಲ್ 2023, 7:07 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ವಕ್ಫ್ ಸಲಹಾ ಸಮಿತಿ ಮೂಲಕ ವಿತರಿಸುವ ಮದುವೆ ಪ್ರಮಾಣಪತ್ರಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಮಂಗಳೂರು ಅಂಚೆ ವಿಭಾಗವು ಬುಧವಾರ ಆರಂಭಿಸಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ಈ ಯೋಜನೆ ಮಂಗಳೂರು ಅಂಚೆ ವಿಭಾಗದಲ್ಲಿ ಜಾರಿಯಾಗಿದೆ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಹಾಗೂ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್. ಅವರು ಬುಧವಾರ ಒಡಂಬಡಿಕೆಗೆ ಸಹಿ ಹಾಕಿದರು.

ಮುಸ್ಲಿಂ ಸಮುದಾಯದ ದಂಪತಿಯ ಮದುವೆ ಪ್ರಮಾಣಪತ್ರಗಳನ್ನು ಪಡೆಯಲು ಅರ್ಜಿದಾರರು ಎರಡು ಬಾರಿ ಮಂಗಳೂರಿನ ಜಿಲ್ಲಾ ವಕ್ಫ್ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಇದರಿಂದಾಗಿ ದೂರದ ಸ್ಥಳಗಳಿಂದ ಬರುವವರು ಸಮಯ ಹಾಗೂ ಹೆಚ್ಚಿನ ಹಣ ವ್ಯಯಿಸಬೇಕಾದ ಸಂದರ್ಭವಿತ್ತು. ಇದೀಗ ಈ ತೊಂದರೆಗೆ ಸೂಕ್ತ ಪರಿಹಾರ ಸಿಕ್ಕಿದಂತಾಗಿದೆ.

‘ಅರ್ಜಿದಾರರು ಸ್ಪೀಡ್ ಪೋಸ್ಟ್ ಆಯ್ಕೆಯನ್ನು ಅರ್ಜಿಯಲ್ಲಿ ನಮೂದಿಸಿ, ₹ 80 ಶುಲ್ಕ ಪಾವತಿಸಿದರೆ, ಮನೆ ಬಾಗಿಲಿಗೆ ಪ್ರಮಾಣಪತ್ರ ತಲುಪುತ್ತದೆ. ವಕ್ಫ್ ಕಚೇರಿಗೆ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಪ್ರಮಾಣಪತ್ರ ಮುದ್ರಣಗೊಂಡು, ನಂತರ ಎರಡರಿಂದ ಐದು ದಿನಗಳ ಒಳಗೆ ಸ್ಪೀಡ್ ಪೋಸ್ಟ್ ಮೂಲಕ ಅದು ಅರ್ಜಿದಾರರ ಮನೆಯ ವಿಳಾಸಕ್ಕೆ ತಲುಪುತ್ತದೆ’ ಎಂದು ಅಂಚೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT