ಮಂಗಳೂರು: ‘ಕೇಂದ್ರ ಸರ್ಕಾರದ ಉಮ್ಮೀದ್ ಪೋರ್ಟಲ್ನಲ್ಲಿ ವಕ್ಫ್ ಆಸ್ತಿಗಳನ್ನು ಅಪ್ಲೋಡ್ ಮಾಡದಿದ್ದರೆ, ಕಾನೂನು ತೊಡಕು ಎದುರಿಸಬೇಕಾಗುತ್ತದೆ. ಭವಿಷ್ಯದಲ್ಲಿ ಸಮಸ್ಯೆ ಎದುರಾದರೆ ಪರಿಹರಿಸುವುದು ಕಷ್ಟ. ಹಾಗಾಗಿ ಈಗ ಸಿಕ್ಕಿರುವ ಅವಕಾಶ ಕಡೆಗಣಿಸಬಾರದು’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಕರ್ನಾಟಕ ರಾಜ್ಯ ವಕ್ಪ್ ಮಂಡಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ ಆಶ್ರಯದಲ್ಲಿ
ಇಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲೆಯ ವಕ್ಫ್ ಸಂಸ್ಥೆಗಳ ವಿವರಗಳಮ್ನ ಉಮ್ಮೀದ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಈ ಕಾರ್ಯವನ್ನು ಸ್ವಂತ ಕೆಲಸ, ಮನೆಯ ಕೆಲಸ ಎಂದು ಭಾವಿಸಬೇಕು. ಜಮಾತ್ ವ್ಯಾಪ್ತಿಯಲ್ಲಿರುವ ಕಂಪ್ಯೂಟರ್ ಪರಿಜ್ಞಾನ ಹೊಂದಿರುವವರ ನೆರವು ಪಡೆದು ಈ ಕಾರ್ಯವನ್ನು ಗಡುವಿನ (ಡಿ.5) ಒಳಗೆ ಪೂರ್ಣಗೊಳಿಸಬೇಕು. ತ್ವರಿತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸುವ ಮಸೀದಿಗೆ ವಕ್ಪ್ ಮಂಡಳಿಯು ವಿಶೇಷ ಅನುದಾನ ನೀಡಬೇಕು. ತಾಂತ್ರಿಕ ಸಮಸ್ಯೆ ನಿವಾರಣೆಗೆ ವಕ್ಫ್ ಮಂಡಳಿಯು ಸಹಾಯವಾಣಿ ಆರಂಭಿಸಬೇಕು’ ಎಂದರು.

ರಾಜ್ಯ ವಕ್ಪ್ ಮಂಡಳಿ ಸದಸ್ಯ ಆರ್.ಅಬ್ದುಲ್ ರಿಯಾಜ್ ಖಾನ್, ‘ಪ್ರತಿ ಮಸೀದಿಗೆ ಒಂದಕ್ಕಿಂತ ಹೆಚ್ಚು ಆಸ್ತಿಗಳಿದ್ದರೆ, ಒಂದರ ನಂತರ ಒಂದು ಅಪ್ಲೋಡ್ ಮಾಡಬಹುದು. ಆಸ್ತಿ ಸಂಖ್ಯೆ, ಅವುಗಳ ಒಟ್ಟು ವಿಸ್ತೀರ್ಣ, ಚೆಕ್ಕುಬಂದಿ ಸರಿಯಾಗಿ ಪರಿಶೀಲಿಸಬೇಕು. ಒಮ್ಮೆ ಸಬ್ಮಿಟ್ ಬಟನ್ ಒತ್ತಿದ ಬಳಿಕ ತಿದ್ದುಪಡಿ ಸಾಧ್ಯವಿಲ್ಲ’ ಎಂದರು.

ರಾಜ್ಯ ವಕ್ಪ್ ಮಂಡಳಿ ಸದಸ್ಯ ಖಾಲಿದ್ ಅಹಮದ್, 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 83 ಸಂಸ್ಥೆಗಳು ಮಾತ್ರ ವಿವರ ಅಪ್ಲೋಡ್ ಮಾಡಿದ್ದು, ಪ್ರಮಾಣ ತೀರಾ ಕಡಿಮೆ ಇದೆ. ಜಿಲ್ಲಾ ವಕ್ಪ್ ಮಂಡಳಿಯ ಕಚೇರಿಯಲ್ಲಿ ನಾಲ್ಕೈದು ಜನರನ್ನು ಹೆಚ್ಚುವರಿಯಾಗಿ ನೇಮಿಸಿಕೊಂಡು ಗಡುವಿನೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು’ ಎಂದು ಸಲಹೆ ನೀಡಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ಹಾಗೂ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಾಫ, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಮೋಂಟುಗೋಳಿ ಅವರನ್ನು ಸನ್ಮಾನಿಸಲಾಯಿತು.

ಎಸ್.ಎಂ.ಆರ್ ರಷೀದ್, ಉಸ್ಮಾನ್ ಪಾಣೆಮಂಗಳೂರು, ವಕಫ್ ಮಂಡಳಿ ಸದಸ್ಯ ಅಬ್ದುಲ್ ರಹ್ಮಾನ್ ಕೋಡಿಜಾಲ್, ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್, ಕಾಂಗ್ರೆಸ್ ಮುಖಂಡ ಕೆ.ಅಶ್ರಫ್, ಮುಡಿಪು ಸಂಯುಕ್ತ ಜಮಾತ್ ಅಧ್ಯಕ್ಷ ಎಸ್.ಕೆ ಖಾದರ್, ಮಿತ್ತಬೈಲ್ ಮಸೀದಿ ಅಧ್ಯಕ್ಷ ಮುಹಮ್ಮದ್ ಪರ್ಲ್ಯ, ಎಂ.ಎಚ್ ಮೊಹ್ದಿನ್ ಅಡ್ಡೂರು, ಯಾಹ್ಯಾ ಉಡುಪಿ, ಫಕೀರಬ್ಬ ಮಾಸ್ಟರ್, ಎ.ಕೆ.ಜಮಾಲ್, ಹಮೀದ್ ಕಣ್ಣೂರು ಹಾಗೂ ಅಹ್ಮದ್ ಬಾವ ಭಾಗವಹಿಸಿದ್ದರು.

ಸಮಿತಿ ನಿಕಟ ಪೂರ್ವ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕೀಸ್ಟಾರ್ ಸ್ವಾಗತಿಸಿದರು. ಸೈದುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಕಿನಾರ ವಂದಿಸಿದರು.

‘ಸರ್ಕಾರಿ ಜಾಗದ ಮಸೀದಿ ವಿವರವನ್ನೂ ಸಲ್ಲಿಸಿ’

'ಖಾತಾ ವಹಿ ಇ–ಸ್ವತ್ತು ಸಹಿತ 13 ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು. ಸರ್ಕಾರಿ ಜಾಗದಲ್ಲಿ ಮಸೀದಿ ಇದ್ದು ದಾಖಲೆಗಳು ಮಸೀದಿ ಹೆಸರಿಗೆ ವರ್ಗಾವಣೆಯಾಗದಿದ್ದರೂ ‘ವಕ್ಫ್ ಬೈ ಯೂಸರ್’ ಎಂದು ವಿವರ ಅಪ್ಲೋಡ್ ಮಾಡಬಹುದು’ ಎಂದು ರಾಜ್ಯ ವಕ್ಫ್ ಮಂಡಳಿಯ ಪರಿಶೀಲನಾ ಸಮಿತಿ ಅಧ್ಯಕ್ಷ ಕೆ.ಅನ್ವರ್ ಪಾಷಾ ತಿಳಿಸಿದರು. ‘ಒಬ್ಬ ಮುತವಲ್ಲಿ ಒಂದು ಸಂಸ್ಥೆಯ ಆಸ್ತಿ ವಿವರಗಳನ್ನು ಮಾತ್ರ ಅಪ್ಲೋಡ್ ಮಾಡಬಹುದು. ಯಾರಾದರೂ ಒಂದಕ್ಕಿಂತ ಹೆಚ್ಚು ಮಸೀದಿಗಳಲ್ಲಿ ಮುತವಲ್ಲಿಯಾಗಿದ್ದರೆ ಆಯಾ ಮಸೀದಿಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಅಪ್ಲೋಡ್ ಮಾಡಬಹುದು. ಆಡಳಿತ ಮಂಡಳಿ ಅವಧಿ ಮುಗಿದರೆ ಅದರ ಸದಸ್ಯರು ಅಪ್ಲೋಡ್ ಮಾಡುವಂತಿಲ್ಲ. 2 ತಿಂಗಳ ಈಚೆಗೆ ಅವಧಿ ಮುಗಿದ ಆಡಳಿತ ಮಂಡಳಿಗಳ ಅವಧಿಯನ್ನು 3 ತಿಂಗಳು ವಿಸ್ತರಿಸಿ ವಕ್ಫ್ ಮಂಡಳಿಯು ಸಮಸ್ಯೆಯನ್ನು ನಿವಾರಿಸಿದೆ’ ಎಂದರು.

ಡಿ. 5 ರ ಒಳಗೆ ವಕ್ಫ್ ಆಸ್ತಿ ವಿವರ ಅಪ್ಲೋಡ್ ಮಾಡದಿದ್ದರೆ ಆ ಮಸೀದಿಗಳು ತೊಂದರೆಗೆ ಸಿಲುಕಲಿವೆ. ಬಳಿಕ ಈ ವಿಚಾರವನ್ನು ನ್ಯಾಯಮಂಡಳಿಯಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕಾಗುತ್ತದೆ
–ಕೆ.ಅನ್ವರ್ ಪಾಷ, ರಾಜ್ಯ ವಕ್ಫ್ ಮಂಡಳಿಯ ಪರಿಶೀಲನಾ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.