ಪಾಲಿಕೆ ಚರಂಡಿಯನ್ನು ಸಕಾಲಕ್ಕೆ ಸ್ವಚ್ಛಗೊಳಿಸಬೇಕು. ಸಾರ್ವಜನಿಕರೂ ಪ್ರಜ್ಞಾವಂತರಾಗಿ ಮನೆಯ ಹೊಲಸು ನೀರನ್ನು ತೋಡಿಗೆ ಬಿಡಬಾರದು.
ಗೋಪಾಲ್ ಸ್ಥಳೀಯ ನಿವಾಸಿ
ಚರಂಡಿಯ ಚೇಂಬರ್ ಅನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ರಸ್ತೆ ಮೇಲೆ ಕೊಳಚೆ ನೀರು ಅದರಿಂದ ಆಗುವ ದುರ್ನಾತ ತಪ್ಪುತ್ತದೆ.
ದೇವದಾಸ್ ಸ್ಥಳೀಯ ನಿವಾಸಿ
‘ಜನರಲ್ಲೂ ಜಾಗೃತಿ ಅಗತ್ಯ’
‘ನಮ್ಮ ವಾರ್ಡ್‌ನಲ್ಲಿ ಚರಂಡಿ ಸಮಸ್ಯೆ ಬೃಹದಾಕಾರವಾಗಿದೆ. ಶೇ 80ರಷ್ಟು ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದೇನೆ. ಮಳೆಗಾಲದಲ್ಲಿ ಚರಂಡಿಯ ತಡೆಗೋಡೆ ಬೀಳುತ್ತಿರುವುದು ಸವಾಲಾಗಿದೆ. ಮಳೆಗಾಲದಲ್ಲಿ ಪರಪಾದೆಯ ಕೆಲವು ಮನೆಗಳ ಒಳಗೆ ಕೊಳಚೆ ನೀರು ನುಗ್ಗುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರ ಒದಗಿಸಲಾಗಿದೆ. ಸಾರ್ವಜನಿಕರು ಮನೆಯ ಹೊಲಸು ನೀರನ್ನು ಜೊತೆಗೆ ಮಳೆ ನೀರನ್ನು ಚರಂಡಿಗೆ ಬಿಡಬಾರದು. ಇದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ. ಜನರಲ್ಲೂ ಜಾಗೃತಿ ಮೂಡಬೇಕು’ ಎನ್ನುತ್ತಾರೆ ವಾರ್ಡ್‌ನ ನಿಕಟಪೂರ್ವ ಸದಸ್ಯೆ ರಂಜನಿ ಕೋಟ್ಯಾನ್. ವಾರ್ಡ್‌ನ ಬಹುತೇಕ ಕಡೆಗಳಲ್ಲಿ ರಸ್ತೆ ನಿರ್ಮಿಸಲಾಗಿದೆ. ಹೊಸ ಬಡಾವಣೆಗಳಲ್ಲಿ ರಸ್ತೆ ನಿರ್ಮಾಣ ಬಾಕಿ ಉಳಿದಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.