ಉಳ್ಳಾಲ: ಚರಂಡಿ ಅವ್ಯವಸ್ಥೆಯಿಂದಾಗಿ ದೇರಳಕಟ್ಟೆಯ ಕಾನಕ್ಕೆರೆ ಪ್ರದೇಶದ 20 ಬಾವಿಗಳ ನೀರು ಕಲುಷಿತಗೊಂಡಿದ್ದು, ಇದರಿಂದ ಪ್ರದೇಶದಲ್ಲಿ ಕುಡಿಯುವ ನೀರಿನ ತೊಂದರೆಗೆ ಎದುರಾಗಿದೆ ಎಂದು ಗ್ರಾಮಸ್ಥರು ಜಿಲ್ಲಾಡಳಿತ , ಸ್ಥಳೀಯ ಪಂಚಾಯಿತಿಗಳಿಗೆ ದೂರು ನೀಡಿದ್ದಾರೆ.

ದೇರಳಕಟ್ಟೆ ಜಂಕ್ಷನ್‌ನಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಸಿದ್ಧಿ ವ್ಯೂ ಅನ್ನುವ ಖಾಸಗಿ ಕಟ್ಟಡದಿಂದ ಚರಂಡಿ ಅವ್ಯವಸ್ಥೆ ನಿರ್ಮಾಣವಾಗಿದೆ. ಇದರಿಂದ 100 ವರ್ಷಗಳಿಂದ ಬಾಳುತ್ತಿರುವ ಕಾನೆಕೆರೆ ಪ್ರದೇಶದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

‘ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಹೊಟೇಲು, ಅಂಗಡಿಗಳು ಹಾಗೂ ಲಾಡ್ಜಿಂಗ್ ಇವೆ. ಆದರೆ ಕಟ್ಟಡದ ಮಾಲೀಕರು ಚರಂಡಿ ನಿರ್ಮಿಸಿದ್ದರೂ, ತೈಲದಂತೆ ರಾಸಾಯನಿಕ ಹರಿದು ಸ್ಥಳೀಯ ಬಾವಿಗಳನ್ನು ಸೇರುತ್ತಿದೆ. ಬಾವಿಗಳಲ್ಲಿನ ನೀರು ಕುಡಿಯಲು ಅಯೋಗ್ಯವಾಗಿದೆ. ವರ್ಷದಿಂದ ಸಮಸ್ಯೆ ಉಲ್ಬಣವಾಗಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯ ಬೆಳ್ಮ ಗ್ರಾಮ ಪಂಚಾಯಿತಿಗೆ ದೂರು ನೀಡುತ್ತಾ ಬಂದಿದ್ದೇವೆ . ಆದರೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂಬುದು ಸ್ಥಳೀಯರ ಆರೋಪ.

ಪೈಪ್ ಮುಚ್ಚಿದ ಪಂಚಾಯಿತಿ: ‘ ಭಾನುವಾರ ಬೆಳ್ಮ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷ, ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಟ್ಟಡದಿಂದ ಹೊರಬರುವ ನೀರಿನ ಪೈಪುಗಳನ್ನು ಮುಚ್ಚಿದ್ದಾರೆ. ಕಟ್ಟಡದವರು ಸ್ಥಳೀಯ ನಿವಾಸಿಗಳಿಗೆ ಮುಂದೆ ತೊಂದರೆಯಾಗದಂತೆ ಕ್ರಮಕೈಗೊಳ್ಳುವವರೆಗೂ ಪೈಪ ಅನ್ನು ಮುಚ್ಚಿಯೇ ಇಡಲಾಗುವುದು’ ಎಂದು ಉಪಾಧ್ಯಕ್ಷ ಸತ್ತಾರ್ ತಿಳಿಸಿದ್ದಾರೆ.

‘150 ಮನೆಗಳ ನಿವಾಸಿಗಳು ಬಾವಿಯ ನೀರನ್ನು ಆಶ್ರಯಿಸುತ್ತಿದ್ದಾರೆ. ಆದರೆ ಖಾಸಗಿ ಕಟ್ಟಡದ ಚರಂಡಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದರಿಂದ ದಾರಿಯುದ್ದಕ್ಕೂ ಮಲಿನ ನೀರು ಹರಿದು ಜನರಿಗೆ ನಡೆದಾಡಲು ತೊಂದರೆಯಾಗುತ್ತಿದೆ. ಚರಂಡಿ ನೀರಿಗೆಂದು ಕಟ್ಟಡದ ಮಾಲೀಕರು ಬಾವಿ ಕಟ್ಟಿ ಅದರೊಳಕ್ಕೆ ಬಿಡುತ್ತಿದ್ದಾರೆ. ಆದರೆ ಇದರಿಂದಾಗಿ ಬಾವಿಗಳೆಲ್ಲವೂ ಕಲುಷಿತಗೊಂಡಿವೆ. ಜನರಿಗೆ ಕುಡಿಯಲು ಸರಿಯಾದ ನೀರು ಕೂಡಾ ಇಲ್ಲ. ಪಂಚಾಯಿತಿ ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸವನ್ನು ಕೊಟ್ಟಿದೆ’ ಎಂದು ಕಾನೆಕ್ಕೆರೆ ನಿವಾಸಿ ಮಹಮ್ಮದ್ ಫಾರೂಕ್ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.