ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲ್ಕಿ: ದೇವಸ್ಥಾನದೊಳಗೆ ನುಗ್ಗಿದ ನೀರು

Published 25 ಮೇ 2024, 15:32 IST
Last Updated 25 ಮೇ 2024, 15:32 IST
ಅಕ್ಷರ ಗಾತ್ರ

ಮೂಲ್ಕಿ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿಯಿಡೀ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ತಾಲ್ಲೂಕಿನ ಹಳೆಯಂಗಡಿಯ ಕದಿಕೆ ಮಸೀದಿ ಬಳಿಯ ಶಮೀನಾ ಎಂಬವರ ಮನೆ ಮೇಲೆ ಮರ ಉರುಳಿ ಹಾನಿಯಾಗಿದೆ. ಹೆದ್ದಾರಿಯ ಒಳ ಚರಂಡಿ ಅವ್ಯವಸ್ಥೆಯಿಂದ, ನೀರು ರಸ್ತೆ ಮೇಲೆ ನಿಂತು ವಾಹನಗಳು ಸಾಗುವಾಗ ರಸ್ತೆ ಪಕ್ಕ ನಡೆಯುವರ ಮೇಲೆ ಕೆಸರು ನೀರು ಸಿಡಿಯುತ್ತಿತ್ತು.

ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಮಳೆ ನೀರು ನುಗ್ಗಿ ಪೂಜೆ ಹಾಗೂ ದೇವರ ಬಲಿ ಪ್ರದಕ್ಷಿಣೆಗೆ ಅಡಚಣೆ ಉಂಟಾಯಿತು. ಕಿನ್ನಿಗೋಳಿ, ಹಳೆಯಂಗಡಿ, ಕಟೀಲು, ಪಕ್ಷಿಕೆರೆ, ಪಡುಪಣಂಬೂರು, ಮಾನಂಪಾಡಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಕಂಡಿಬಂದಿತು. ಚಿತ್ರಾಪು ಬಳಿ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT