ಸೆಂಟ್ರಲ್ ನಿಲ್ದಾಣದಲ್ಲಿ ನೀರಿನ ಯಂತ್ರ

7
ದಕ್ಷಿಣ ರೈಲ್ವೆಯಿಂದ 3 ಯಂತ್ರಗಳ ಅಳವಡಿಕೆ

ಸೆಂಟ್ರಲ್ ನಿಲ್ದಾಣದಲ್ಲಿ ನೀರಿನ ಯಂತ್ರ

Published:
Updated:
Deccan Herald

ಮಂಗಳೂರು: ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ದಕ್ಷಿಣ ರೈಲ್ವೆ, ನಗರದ ಸೆಂಟ್ರಲ್ ನಿಲ್ದಾಣದಲ್ಲಿ 3 ನೀರು ಮಾರಾಟ ಯಂತ್ರಗಳನ್ನು ಅಳವಡಿಸಿದೆ. ಶನಿವಾರ ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಸದಸ್ಯ, ಪಾಲಕ್ಕಾಡ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಎಂ.ಅಹ್ಮದ್‌ ಬಾವ, ಈ ಯಂತ್ರಗಳನ್ನು ಉದ್ಘಾಟಿಸಿದರು.

ಮುಖ್ಯ ವಾಣಿಜ್ಯ ನಿರೀಕ್ಷಕ ಪಿ. ಸುರೇಸನ್, ಆರ್‌ಪಿಎಫ್‌ ಇನ್‌ಸ್ಪೆಕ್ಟರ್‌ ಫಿರೋಜ್‌, ಇತರರು ಭಾಗವಹಿಸಿದ್ದರು. ಮೊದಲ ಪ್ಲಾಟ್‌ಫಾರ್ಮ್‌ನ ಎರಡೂ ಬದಿಯಲ್ಲಿ ಒಂದೊಂದು ಹಾಗೂ ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನೊಂದು ಯಂತ್ರವನ್ನು ಅಳವಡಿಸಲಾಗಿದೆ.

ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮದ ನಿಗಮ (ಐಆರ್‌ಸಿಟಿಸಿ)ಯಿಂದ ಈ ಯಂತ್ರಗಳ ಅಳವಡಿಕೆ ಆರಂಭಿಸಲಾಗಿದೆ. ಐಆರ್‌ಸಿಟಿಸಿಯು ರೈಲ್ವೆ ವಿಭಾಗದಲ್ಲಿ ಕ್ಲಸ್ಟರ್‌ಗಳನ್ನು ಮಾಡಿ, ಆ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳಲ್ಲಿ ಈ ಯಂತ್ರಗಳ ಅಳವಡಿಸುತ್ತಿದೆ. ಪಾಲ್ಘಾಟ್‌ ವಿಭಾಗದ 9 ನಿಲ್ದಾಣಗಳಲ್ಲಿ ಇಂತಹ 27 ಯಂತ್ರಗಳನ್ನು ಅಳವಡಿಸಲಾಗಿದೆ.

ಪಾಲ್ಘಾಟ್‌, ಕೋಝಿಕ್ಕೋಡ್‌, ತಲಶ್ಶೇರಿ, ಕಣ್ಣೂರು ನಿಲ್ದಾಣಗಳಲ್ಲಿ ತಲಾ ಎರಡರಂತೆ ಎಂಟು ಯಂತ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ಮೂರು ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ ಒಂದು ಯಂತ್ರವನ್ನು ಅಳವಡಿಸಲಾಗುತ್ತಿದೆ.

ಈ ಯಂತ್ರಗಳು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಪ್ರತಿ ಗಂಟೆಗೆ 500 ಲೀಟರ್ ನೀರನ್ನು ಶುದ್ಧೀಕರಿಸಿ, ತಂಪಾಗಿಸುತ್ತವೆ. ಈ ಯಂತ್ರಗಳು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯ ಮಾಡಲಿದ್ದು, ಉಳಿದ ಸಮಯದಲ್ಲಿ ನಾಣ್ಯ ಹಾಕಿ ಒಂದು ಲೀಟರ್‌ ನೀರು ಪಡೆಯುವ ಯಂತ್ರವನ್ನು ಸ್ಥಾಪಿಸಲು ಯೋಜಿಸಲಾಗಿದೆ.

ನೀರಿನ ಯಂತ್ರಗಳಲ್ಲಿ ಏಳು ಹಂತದಲ್ಲಿ ಶುದ್ಧೀಕರಣ ಮಾಡಲಾಗುತ್ತಿದೆ. ಹೀಗಾಗಿ ಈ ನೀರು ಆರೋಗ್ಯಕ್ಕೆ ಉತ್ತಮ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

                                                      ನೀರಿನ ದರ

ಪ್ರಮಾಣ ನೀರು ಬಾಟಲ್‌ ಸಹಿತ
300 ಎಂ.ಎಲ್ ₹1 ₹2
ಅರ್ಧ ಲೀಟರ್‌ ₹3 ₹5
1 ಲೀಟರ್‌ ₹5 ₹8
2 ಲೀಟರ್‌ ₹8 ₹12
5 ಲೀಟರ್ ₹20 ₹25

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !