ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಸೋಮವಾರ ಸಂಜೆ ಕಾಡಾನೆ ಓಡಾಡಿದೆ.
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಸೋಮವಾರ ಸಂಜೆ ಕಾಡಾನೆ ಓಡಾಡಿದೆ.
ADVERTISEMENT
ADVERTISEMENT
ದೇವರಗದ್ದೆ ಅರಣ್ಯ ಪ್ರದೇಶದಿಂದ ಬಂದ ಒಂಟಿ ಕಾಡಾನೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯಾಸಮಂದಿರ ಬಳಿಯಿಂದ ಸುಬ್ರಹ್ಮಣ್ಯ ಮಠದ ಸಮೀಪದ ಮೂಲಕ ಸಂಚರಿಸಿ, ಮತ್ತೆ ಅರಣ್ಯ ಭಾಗಕ್ಕೆ ತೆರಳಿದೆ.
ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾಡಾನೆ ಅರಣ್ಯದೊಳಗೆ ಸೇರಿರುವ ಬಗ್ಗೆ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆ ಮೇಲೆ ನಿಗಾ ಇಡಲು ಅರಣ್ಯ ಇಲಾಖೆಯು ತಂಡ ರಚಿಸಿದೆ. ಕಾಡಾನೆ ಕಂಡುಬಂದರೆ ಮಾಹಿತಿ ನೀಡಬೇಕು ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.