ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಂಗಡಿ: ಆ್ಯಂಬುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

Published 28 ಜೂನ್ 2024, 14:03 IST
Last Updated 28 ಜೂನ್ 2024, 14:03 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಗುರುವಾರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.

ಬಂಟ್ವಾಳ ತಾಲ್ಲೂಕು ಕಕ್ಕೆಪದವು ಪರಿಸರದ ಉಮೇಶ್ ಎಂಬುವರ ಪತ್ನಿ ಪವಿತ್ರಾ ಅವರು ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಆಸ್ಪತ್ರೆಗೆ ಹೋಗಲು 108 ಆಂಬುಲೆನ್ಸ್ ಸೇವೆಗಾಗಿ ಕರೆ ಮಾಡಿದ್ದರು. ಈ ವೇಳೆ ಪರಿಸರದ ಎರಡೂ ಆಂಬುಲೆನ್ಸ್‌ಗಳು ಬೇರೆಡೆ ಇದ್ದ ಕಾರಣ, ಉಪ್ಪಿನಂಗಡಿಯಲ್ಲಿದ್ದ ಆಂಬುಲೆನ್ಸ್ ಅನ್ನು ಸೇವೆಗೆ ಕರೆಸಲಾಗಿತ್ತು. ಉಪ್ಪಿನಂಗಡಿಯಿಂದ ಕಕ್ಕೆಪದವಿಗೆ ಹೋಗಿ ಗರ್ಭಿಣಿಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ದಾರಿ ಮಧ್ಯೆ ಬಂಟ್ವಾಳ ಸಮೀಪ ಪವಿತ್ರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಅಂಬುಲೆನ್ಸ್ ಸಿಬ್ಬಂದಿ ರುಬೆನ್ ಕರ್ಜೆಟ್ಟಿ ಸುರಕ್ಷಿತ ಹೆರಿಗೆ ಮಾಡಿಸಿದರು. ಆಂಬುಲೆನ್ಸ್ ಚಾಲಕ ವೀರೇಶ್ ಸಹಕರಿಸಿದರು. ತಾಯಿ ಮಗು ಇಬ್ಬರೂ ಆರೋಗ್ಯದಿಂದ ಇದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆಗೆ ಒಳಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT