ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲ್ಕಿ | ಪ್ರಿಯತಮೆಯ ಆತ್ಮಹತ್ಯೆ– ರೈಲಿಗೆ ತಲೆ ಕೊಟ್ಟ ಯುವಕ

Published 19 ಮೇ 2024, 15:53 IST
Last Updated 19 ಮೇ 2024, 15:53 IST
ಅಕ್ಷರ ಗಾತ್ರ

ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಖಿನ್ನತೆಗೊಳಗಾಗಿ ಯುವಕ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೈಲೊಟ್ಟು ನಿವಾಸಿ ಕಾರ್ತಿಕ್‌ (20) ಮೃತ ಯುವಕ. ಅವರು ಮೂಡಬಿದಿರೆ ತಾಲ್ಲೂಕಿನ  ಯುವತಿಯನ್ನು ಪ್ರೀತಿಸುತ್ತಿದ್ದರು. ಆಕೆಯ ತಾಯಿಯ ಮನೆ ಮೂಲ್ಕಿಯಲ್ಲಿತ್ತು. ಇಲ್ಲಿನ ಕಾಲೇಜೊಂದರಲ್ಲಿ ಬಿಬಿಎಂ ಓದುತ್ತಿದ್ದಾಗ ಅವರ ನಡುವೆ ಪ್ರೀತಿ ಬೆಳೆದಿತ್ತು ಎಂದು ಕಾರ್ತಿಕ್‌ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಇಬ್ಬರ ಪ್ರೀತಿಯ ವಿಷಯ ತಿಳಿದ ಬಳಿಕ ಯುವತಿಯನ್ನು ಆಕೆಯ ಮನೆಯವರು ಕಾಲೇಜು ಬಿಡಿಸಿ, ಮೂಡುಬಿದಿರೆಯ ಮನೆಯಲ್ಲೇ ಉಳಿಸಿಕೊಂಡಿದ್ದರು. ಆ ಯುವತಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕಾರ್ತಿಕ್‌ ಆಕೆಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಶನಿವಾರ ಮೂಡಬಿದಿರೆಗೆ ತೆರಳಿದ್ದರು. ಆಕೆಯ ಮೃತದೇಹವನ್ನು ವೀಕ್ಷಿಸಲು ಮನೆಯವರು ಅವಕಾಶ ನೀಡಿರಲಿಲ್ಲ. ಇದರಿಂದ ಯುವಕ ಬೇಸರಗೊಂಡಿದ್ದ ಎಂದು ಆತನ ನಿಕಟವರ್ತಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT