ಉಳ್ಳಾಲ: ವೈದ್ಯರ ಬಳಿ ತಪಾಸಣೆಗೆಂದು ತೆರಳಿದ್ದ ಯುವಕ ಕುಸಿದು ಬಿದ್ದು ಸಾವ ನ್ನಪ್ಪಿರುವ ಘಟನೆ ನಗರದ ಕೆ.ಎಂ.ಸಿ ಆಸ್ಪತ್ರೆ ಯಲ್ಲಿ ಸಂಭವಿಸಿದೆ.

ಕುಂಪಲ ಆಶ್ರಯ ಕಾಲೊನಿ ನಿವಾಸಿ ರಿಕ್ಷಾ ಚಾಲಕ ರಾಜೇಶ್ ರಾವ್ (31) ಮೃತರು.

ಹೃದಯ ಸಂಬಂಧಿತ ಸಮಸ್ಯೆಗಾಗಿ ವಾರದ ಹಿಂದೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದರು. ಅಲ್ಲಿ ಅಧಿಕ ರಕ್ತದೊತ್ತಡ ಇರುವುದನ್ನು ವೈದ್ಯರು ತಿಳಿಸಿದ್ದರು. ಎದೆನೋವು ಕಡಿಮೆಯಾಗದ ಕಾರಣ ಮಂಗಳೂರಿನ ಆಸ್ಪತ್ರೆಗೆ ಸ್ನೇಹಿತರು ಕರೆದೊಯ್ದಿದ್ದರು. ಈ ವೇಳೆ ಪ್ರಕಾಶ್ ಅವರಿಗೆ ಸೇರಿದ ಕಾರನ್ನು ರಾಜೇಶ್ ರಾವ್ ಅವರೇ ಮಂಗಳೂರಿನವರೆಗೆ ಚಲಾಯಿಸಿದ್ದರು.

ಆಸ್ಪತ್ರೆಯಲ್ಲಿ ವೈದ್ಯರು ರಕ್ತದೊತ್ತಡ ವನ್ನು ಪರೀಕ್ಷಿಸಲು ಮುಂದಾಗುತ್ತಿದ್ದಂತೆ ರಾಜೇಶ್ ರಾವ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಮೇಲ್ನೋಟಕ್ಕೆ ವೈದ್ಯರು ತಿಳಿಸಿದ್ದಾರೆ.

ಮೃತರಿಗೆ ತಂದೆ, ತಾಯಿ ಹಾಗೂ ಸಹೋದರಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.