ಶನಿವಾರ, ಅಕ್ಟೋಬರ್ 24, 2020
25 °C

ಶಾಂಭವಿ ನದಿಯಲ್ಲಿ ಮುಳುಗಿ ಯುವಕ ಸಾವು: ಇಬ್ಬರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ತಾಲ್ಲೂಕಿನ ಕಿನ್ನಿಗೋಳಿ ಸಮೀಪದ ಕರ್ನಿರೆಯಲ್ಲಿ ಭಾನುವಾರ ಶಾಂಭವಿ ನದಿಗೆ ಈಜಲು ಇಳಿದಿದ್ದ ಮೂವರು ಯುವಕರ ಪೈಕಿ ಒಬ್ಬ ಮೃತಪಟ್ಟಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ‌

ಬೆಂಗಳೂರಿನ ಅನಿಲ್ (32) ಮೃತಪಟ್ಟ ಯುವಕ. ಬೆಂಗಳೂರಿನಿಂದ ಬಂದಿದ್ದ ಏಳು ಮಂದಿ ಯುವಕರ ಪೈಕಿ ಮೂವರು ಕರ್ನಿರೆ ಬಳಿ ಶಾಂಭವಿ ನದಿಯಲ್ಲಿ ಈಜಲು ಇಳಿದಿದ್ದರು. ಮೂವರೂ ನದಿ ನೀರಿನ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ನೆರವಿಗೆ ಬಂದಿದ್ದು, ಇಬ್ಬರನ್ನು ಸ್ಥಳಿಯರು ರಕ್ಷಿಸಲು ಸಾಧ್ಯವಾಗಿದೆ. ಮೂಲ್ಕಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.