ಬಂಟ್ವಾಳ: ಬೈಕ್ ಹಾರ್ನ್ ಹಾಕಿದ ಕಾರಣಕ್ಕೆ ಯುವಕನ ಹತ್ಯೆ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ತಲಪಾಡಿ ಎಂಬಲ್ಲಿ ಬೈಕ್ ಹಾರ್ನ್ ಹಾಕಿರುವುದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನನ್ನು ಕೊಲೆ ಮಾಡಲಾಗಿದೆ.
ಸ್ಥಳೀಯ ನಿವಾಸಿ ಮಹಮ್ಮದ್ ಆಶಿಕ್ (27) ಕೊಲೆಯಾದ ಯುವಕ.
ಸ್ಥಳೀಯ ನಿವಾಸಿಗಳಾದ ನೌಫಾಲ್ ಮತ್ತು ಆಸಿಫ್ ಎಂಬವರು ಕೊಲೆ ಆರೋಪಿಗಳು. ಇವರೆಲ್ಲರೂ ಚಿರಪರಿಚಿತರೇ ಆಗಿದ್ದು, ಸೋಮವಾರ ತಡರಾತ್ರಿ ಆಶಿಕ್ ಬೈಕ್ ಹಾರ್ನ್ ಹಾಕಿರುವುದನ್ನು ಆರೋಪಿಗಳು ಆಕ್ಷೇಪಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆದು ಬಳಿಕ ಕೊಲೆಯಲ್ಲಿ ಅಂತ್ಯಗೊಂಡಿದೆ.
ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ನಗರ ಠಾಣೆ ಇನ್ಸ್ಪೆಕ್ಟರ್ ವಿವೇಕಾನಂದ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.