ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲ್ಕಿ: ಯುವ ನೀನಾದದಲ್ಲಿ ಕೃಷಿ ಬದುಕಿನ ಪ್ರಾತ್ಯಕ್ಷಿಕೆ

ಪಾವಂಜೆ: ನೆಲಮೂಲ, ಜಲಮೂಲದ ಸಂಸ್ಕೃತಿ ಪರಿಚಯಿಸುವುದಕ್ಕಾಗಿ ನಡೆದ ಕಾರ್ಯಕ್ರಮ
Published 8 ಏಪ್ರಿಲ್ 2024, 13:26 IST
Last Updated 8 ಏಪ್ರಿಲ್ 2024, 13:26 IST
ಅಕ್ಷರ ಗಾತ್ರ

ಮೂಲ್ಕಿ: ತುಳುವರ ಮಣ್ಣಿನ ಸಂಸ್ಕೃತಿ, ನೆಲಮೂಲ, ಜಲಮೂಲದ ಸಂಸ್ಕೃತಿಯನ್ನು ಯುವ ಸಮುದಾಯಕ್ಕೆ ಪರಿಚಯಿಸುವುದಕ್ಕಾಗಿ ಆಯೋಜಿಸಿದ್ದ  ಯುವನಿನಾದ ಕಾರ್ಯಕ್ರಮ ಪಾವಂಜೆಯ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಮತ್ತು ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆಯಿತು.

ಅಧ್ಯಯನ ಕೇಂದ್ರದ ಮುಂಭಾಗದ ರಾಮಪ್ಪ ಪೂಜಾರಿ ಬಾಕಿಮಾರು ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಐದು ತುಂಟಾನುಗಳಿಗೆ ಬೆಂಕಿ ಇಟ್ಟು ಮಂಡಿಗೆ ಫಲವತ್ತತೆ ಕೂಡಿಸುವುದನ್ನು ನೆನಪಿಸುವ ರೀತಿಯಲ್ಲಿ ನೆಲಮೂಲ ಸಂಸ್ಕೃತಿಯನ್ನು ಉದ್ಘಾಟಿಸಲಾಯಿತು. ಬಾವಿಯಿಂದ ರಾಟೆಯ ಮೂಲಕ ನೀರು ಸೇದಿ ಜಲಮೂಲ ಸಂಸ್ಕೃತಿಯ ಉದ್ಘಾಟನೆ ನಡೆಯಿತು.

ಕಾಟಿಪಳ್ಳ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ದಯಕರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶಕುಂತಲಾ ರಮಾನಂದ ಭಟ್ ನೀನಾದ ನೆನಪನ್ನು ಉದ್ಘಾಟಿಸಿದರು.

ಮೂಲ್ಕಿ ಬಳಿಯ ಪಾವಂಜೆಯಲ್ಲಿ ನಡೆದ ಯುವ ನಿನಾದ ಕಾರ್ಯಕ್ರಮದಲ್ಲಿ ಕೃಷಿ ಸಾಧಕರನ್ನು ಸನ್ಮಾನಿಸಲಾಯಿತು
ಮೂಲ್ಕಿ ಬಳಿಯ ಪಾವಂಜೆಯಲ್ಲಿ ನಡೆದ ಯುವ ನಿನಾದ ಕಾರ್ಯಕ್ರಮದಲ್ಲಿ ಕೃಷಿ ಸಾಧಕರನ್ನು ಸನ್ಮಾನಿಸಲಾಯಿತು

ಅನುರಾಧಾ ರಾಜೀವ್ ಬರೆದು ಪ್ರಕಟಿಸಿರುವ ಭಾವ ಘಮಲು ಮತ್ತು ಅಂತರಂಗ ಸಂವಾದ ಕೃತಿಗಳನ್ನು ಕಡಂಬೋಡಿ ಮಹಾಬಲ ಪೂಜಾರಿ ಮತ್ತು ಕುಸುಮ ಮಹಾಬಲ ಪೂಜಾರಿ ಲೋಕಾರ್ಪಣೆ ಮಾಡಿದರು. ಕೃತಿಗಳ ಬಗ್ಗೆ ಗಣೇಶ್ ಪ್ರಸಾದ್ ಪಾಂಡೆಲ ಮತ್ತು ಗುಣವತಿ ರಮೇಶ್ ಮಾತನಾಡಿದರು. ಅರ್ಪಿತಾ ಶೆಟ್ಟಿ ಕಟ್ಪಾಡಿ ತುಳುನಾಡಿನ ಕೃಷಿ ಬದುಕಿನ ವೈಶಿಷ್ಟ್ಯ ತಿಳಿಸಿದರು. ಮಧುಕರ ಅಮೀನ್, ಯಾದವ ದೇವಾಡಿಗ, ಅಂಬಿಕಾ ಪ್ರಸಾದ್ ಶೆಟ್ಟಿ, ಸದಾಶಿವ ಕುದ್ರಿಪದವು, ಯಶೋಧರ ಸಾಲ್ಯಾನ್, ಮುಲ್ಕಿ ಚಂದ್ರಶೇಖರ್ ಸುವರ್ಣ, ರಾಜೀವ ಸಾಲ್ಯಾನ್, ಮಹಾವೀರ ಜೈನ್, ಪುಷ್ಪಲತಾ ರಾವ್, ಅಧ್ಯಯನ ಕೇಂದ್ರದ ಅಧ್ಯಕ್ಷ ಗಣೇಶ ಅಮೀನ್ ಸಂಕಮಾರ್, ಜಯಂತಿ ಸಂಕಮಾರ್, ಭವ ಸಂಕಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT