ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕೆಲಸ ಕೊಡಿಸುವುದಾಗಿ ₹13.76 ಲಕ್ಷ ವಂಚನೆ

Published 27 ಜೂನ್ 2023, 5:59 IST
Last Updated 27 ಜೂನ್ 2023, 5:59 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರದ ಗ್ರೇಡ್‌ ಆಫೀಸರ್‌ ಕೆಲಸ ಕೊಡಿಸುವ ಆಮಿಷ ಒಡ್ಡಿ ₹13.76 ಲಕ್ಷ ವಂಚಿಸಿರುವ ಪ್ರಕರಣ ತಡವಾಗಿ ವರದಿಯಾಗಿದೆ.

ಖಾಸಗಿ ಶಾಲೆ ಶಿಕ್ಷಕ ಮಧುಸೂದನ್, ಸಿದ್ದು ಹಾದಿಮನಿ, ವೀರೇಂದ್ರ ಟಿ.ಎಂ, ಸುನೀಲ್, ವಿದ್ಯಾ ಷಣ್ಮುಖಪ್ಪ ಹಾಗೂ ಚೈತ್ರಾ ಮೋಸಕ್ಕೊಳಗಾದವರು.

ಹಾವೇರಿಯ ವೀರಭದ್ರಪ್ಪ ಹಾಗೂ ವಿನೋಬಾ ನಗರದ ನಂದಿನಿ ಆರೋಪಿಗಳು.

‘ಪಿಯುಸಿ ಹಾಗೂ ಎಂಜಿನಿಯರಿಂಗ್‌ ಮುಗಿಸಿದವರಿಗೆ ಗ್ರೇಡ್‌ ಆಫೀಸರ್ ಹುದ್ದೆ ಖಾಲಿ ಇವೆ. ಹುದ್ದೆ ಕೊಡಿಸಲು ಖರ್ಚು ವೆಚ್ಚಕ್ಕೆ ದುಡ್ಡು ನೀಡಿ’ ಎಂದು ಆರೋಪಿಗಳು ಹಣ ಪಡೆದಿದ್ದಾರೆ. ನಕಲಿ ಆದೇಶದ ಪ್ರತಿಗಳನ್ನೂ ನೀಡಿ ವಂಚಿಸಿದ್ದಾರೆ. ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT