ಬುಧವಾರ, ಜೂನ್ 29, 2022
21 °C

18ರಿಂದ 44 ವರ್ಷದವರಿಗೆ ಲಸಿಕಾ ನೀಡಲು ಸಿದ್ದ: ಶಾಮನೂರು ಶಿವಶಂಕರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸರ್ಕಾರ ಒಪ್ಪಿಗೆ ನೀಡಿದರೆ 18 ವರ್ಷದಿಂದ 44 ವರ್ಷದವರೆಗಿನವರಿಗೂ ಲಸಿಕೆ ನೀಡಲು ಸಿದ್ಧ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

‘ಇಲ್ಲಿನ ಜನರಿಗೆ ಉಚಿತವಾಗಿ ಕೋವಿಶೀಲ್ಡ್ ಲಸಿಕೆ ನೀಡುತ್ತಿದ್ದೇನೆ. ಸರ್ಕಾರದ ಸೂಚನೆಯಂತೆ 45 ವರುಷದ ಮೇಲಿನವರಿಗೆ ಮಾತ್ರ ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದ ಬಳಿ 2 ದಿನಗಳ ಹಿಂದೆ ಲಸಿಕೆ ಉದ್ಘಾಟನೆಗೊಂಡಿದ್ದು, ಸಾವಿರಾರು ಮಂದಿ ಲಸಿಕೆ ಹಾಕಿಸಿಕೊಂಡು ಆರೋಗ್ಯವಾಗಿದ್ದಾರೆ. 18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡುವಂತೆ ಸಾಕಷ್ಟು ಬೇಡಿಕೆ ಇದೆ. ಸರ್ಕಾರ ನಿರ್ಬಂಧ ಹೇರಿದ್ದು, ಇದನ್ನು ತೆರವುಗೊಳಿಸಿದರೆ ನಾವು 18ರಿಂದ 45 ವರುಷದ ಒಳಗಿನವರಿಗೆ ಲಸಿಕೆ ನೀಡುತ್ತೇವೆ’ ಎಂದು ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು