ಶುಕ್ರವಾರ, ಜೂನ್ 18, 2021
28 °C
61 ವೃದ್ಧರು ಸೇರಿ ಒಂದೇ ದಿನ 381 ಮಂದಿ ಗುಣಮುಖರಾಗಿ ಬಿಡುಗಡೆ

244 ಮಂದಿಗೆ ಕೊರೊನಾ: 5 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ 244 ಮಂದಿಗೆ ಕೊರೊನಾ ಇರುವುದು ಗುರುವಾರ ದೃಢಪಟ್ಟಿದೆ. ಐವರು ಮೃತಪಟ್ಟಿದ್ದಾರೆ.

ಆನಗೋಡಿನ 51 ವರ್ಷದ ಮಹಿಳೆ ಕ್ಷಯರೋಗ ಮತ್ತು ಶ್ವಾಸಕೋಶದ ಸಮಸ್ಯೆಯಿಂದ ಆ.18ರಂದು ಮೃತಪಟ್ಟಿದ್ದಾರೆ. ವಿನೋಬನಗರದ 63 ವರ್ಷದ ವೃದ್ಧ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಆ.18ರಂದು ನಿಧನರಾಗಿದ್ದಾರೆ. ಎಂಸಿಸಿ ಬಿ ಬ್ಲಾಕ್‌ನ 68 ವರ್ಷದ ವೃದ್ಧ ಅಧಿಕ ರಕ್ತದೊತ್ತಡದಿಂದ ಆ.20ರಂದು ಅಸುನೀಗಿದ್ದಾರೆ. ಲೇಬರ್ ಕಾಲೊನಿಯ 60 ವರ್ಷದ ವೃದ್ಧ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಆ.19ರಂದು ನಿಧನರಾಗಿದ್ದಾರೆ. ಹೊಸಬೆಳವನೂರಿನ 75 ವರ್ಷದ ವೃದ್ಧೆ ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಈ ಐವರೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ಕೊರೊನಾ ಇರುವುದು ಖಚಿತವಾಗಿದೆ.

95 ವರ್ಷದ ಇಬ್ಬರು ವೃದ್ಧೆಯರು, 91 ವರ್ಷದ ಇಬ್ಬರು ವೃದ್ಧರು ಸೇರಿ 28 ವೃದ್ಧರಿಗೆ, 28 ವೃದ್ಧೆಯರಿಗೆ ಸೋಂಕು ಇರುವುದು ದೃಢಪಟ್ಟಿದೆ.  10 ಬಾಲಕರು, 8 ಬಾಲಕಿಯರಿಗೂ ಕೊರೊನಾ ಬಂದಿದೆ. 18ರಿಂದ 59 ವರ್ಷದೊಳಗಿನ 102 ಪುರುಷರು, 68 ಮಹಿಳೆಯರಿಗೆ ಸೋಂಕು ತಗುಲಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 133 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ ದೊಡ್ಡಬಾತಿಯ 13, ಕೋಡಿಹಳ್ಳಿಯ 8, ಮೆಳ್ಳೆಕಟ್ಟೆ, ಆಲೂರಿನ ತಲಾ ಇಬ್ಬರು, ಹಳೇಬಾತಿ, ಸಲಗನಹಳ್ಳಿ, ಆನಗೋಡು, ಈಚಘಟ್ಟ, ಹೊಸಬೆಳವನೂರು, ಕಂದಗಲ್‌, ನಾಗರಕಟ್ಟೆಯ ತಲಾ ಒಬ್ಬರಿಗೆ ಸೋಂಕು ಬಂದಿದೆ. ಉಳಿದ 101 ಮಂದಿ ದಾವಣಗೆರೆ ಪಾಲಿಕೆ ವ್ಯಾಪ್ತಿಯವರಾಗಿದ್ದಾರೆ.

ಚನ್ನಗಿರಿ ತಾಲ್ಲೂಕಿನಲ್ಲಿ 39, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 32, ಹರಿಹರ ತಾಲ್ಲೂಕಿನಲ್ಲಿ 28, ಜಗಳೂರು ತಾಲ್ಲೂಕಿನಲ್ಲಿ 8 ಮಂದಿಗೆ ಕೊರೊನಾ ಬಂದಿದೆ.

ಚಿಕಿತ್ಸೆಗಾಗಿ ದಾವಣಗೆರೆಗೆ ಬಂದಿರುವ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಬ್ಬರು, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಒಬ್ಬರು, ಕೂಡ್ಲಿಗಿಯ ಒಬ್ಬರಿಗೆ ಸೋಂಕು ತಗುಲಿದೆ.

32 ವೃದ್ಧರು, 29 ವೃದ್ಧೆಯರು, 11 ಬಾಲಕರು, 15 ಬಾಲಕಿಯರು ಸೇರಿ 381 ಮಂದಿ ಗುರುವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 6270 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 4230 ಮಂದಿ ಗುಣಮುಖರಾಗಿದ್ದಾರೆ. 141 ಮಂದಿ ಮೃತಪಟ್ಟಿದ್ದಾರೆ. 1899 ಪ್ರಕರಣಗಳು ಸಕ್ರಿಯವಾಗಿವೆ. ಅದರಲ್ಲಿ 9 ಮಮದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು