ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | 35 ಮಂದಿಗೆ ಕೊರೊನಾ ಸೋಂಕು ದೃಢ

ದಾವಣಗೆರೆಯ 24, ಹರಿಹರ, ಚನ್ನಗಿರಿಯ ತಲಾ ಒಬ್ಬರು, ಜಗಳೂರು 3, ಹೊನ್ನಾಳಿಯ ಐವರಿಗೆ ಸೋಂಕು
Last Updated 15 ಜುಲೈ 2020, 17:19 IST
ಅಕ್ಷರ ಗಾತ್ರ

ದಾವಣಗೆರೆ: ಇಬ್ಬರು ವೃದ್ಧೆಯರು, ಒಬ್ಬ ವೃದ್ಧ, ಇಬ್ಬರು ಬಾಲಕಿಯರು, ಒಬ್ಬ ಬಾಲಕ ಸೇರಿ ಜಿಲ್ಲೆಯಲ್ಲಿ 35 ಮಂದಿಗೆ ಕೊರೊನಾ ಇರುವುದು ಬುಧವಾರ ದೃಢಪಟ್ಟಿದೆ.

ಬಡಾವಣೆ ಠಾಣೆಯ ಪೊಲೀಸ್‌ ಸಿಬ್ಬಂದಿಯ ಪ್ರಥಮ ಸಂಪರ್ಕದ ಕಾರಣದಿಂದ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ 30 ವರ್ಷದ ಪುರುಷನಿಗೆ ಸೋಂಕು ಇರುವುದು ದೃಢಪಟ್ಟಿದೆ.

ಕುರುಬರಕೇರಿಯ 41 ವರ್ಷದ ಪುರುಷನಿಗೆ 47 ವರ್ಷದ ವ್ಯಕ್ತಿಯ ಸಂಪರ್ಕದಿಂದ ಸೋಂಕು ತಗುಲಿದೆ.

ಕೆಟಿಜೆನಗರದ 40 ವರ್ಷದ ಪುರುಷನ ಸಂಪರ್ಕದಿಂದ ಕೆಟಿಜೆನಗರ 2ನೇ ಮುಖ್ಯರಸ್ತೆ 8ನೇ ಕ್ರಾಸ್‌ನ 22 ವರ್ಷದ ಯುವಕ, 10 ವರ್ಷದ ಬಾಲಕ, 43 ವರ್ಷದ ಮಹಿಳೆ, ಕೆಟಿಜೆನಗರ 3ನೇ ಮುಖ್ಯರಸ್ತೆ 23ನೇ ಕ್ರಾಸ್‌ನ 36 ವರ್ಷದ ಮಹಿಳೆ, 65 ವರ್ಷದ ವೃದ್ಧೆಗೆ ಕೊರೊನಾ ಬಂದಿದೆ.

ದಾವಣಗೆರೆ ಸರಸ್ವತಿ ನಗರದ 30 ವರ್ಷದ ಪುರುಷನಿಗೆ ಶೀತಜ್ವರ ಕಾಣಿಸಿಕೊಂಡಿದೆ.

ಆಜಾದ್‌ನಗರದ 31, 58, 37 ವರ್ಷದ ಮಹಿಳೆಯರಿಗೆ 68 ವರ್ಷದ ವೃದ್ಧನ ಸಂಪರ್ಕದಿಂದ ಸೋಂಕು ಬಂದಿದೆ. ಆಜಾದ್‌ನಗರದ 34 ವರ್ಷದ ಪುರುಷನಿಗೆ ಕೊರೊನಾ ಬಂದಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಶಂಕರನಾರಾಯಣ ವಿಹಾರ್‌ ಲೇಔಟ್‌ನ 61 ವರ್ಷದ ವೃದ್ಧನಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ಲೆನಿನ್‌ ನಗರದ 45 ವರ್ಷದ ಮಹಿಳೆ ಶೀತಜ್ವರ ಬಂದಿದೆ. ನಾಯ್ಡು ಹೋಟೆಲ್‌ ಬಳಿಯ ನಿವಾಸಿ 55 ವರ್ಷದ ಪುರುಷನಿಗೂ ಶೀತಜ್ವರ ಎಂದು ಗುರುತಿಸಲಾಗಿದೆ.

ಇಮಾಂನಗರ 49 ವರ್ಷದ ಮಹಿಳೆ ಮತ್ತು ಮೆಹಬೂಬ್‌ ನಗರದ 30 ವರ್ಷದ ಯುವಕನಿಗೆ 33 ವರ್ಷದ ಮಹಿಳೆಯ ಸಂಪರ್ಕದಿಂದ ಕೊರೊನಾ ಬಂದಿದೆ. ದಾವಣಗೆರೆ ಹೊಸ್ಕೆರೆ 34 ವರ್ಷದ ಪುರುಷನಿಗೆ ಸೋಂಕು ಬಂದಿದ್ದು, ಎಲ್ಲಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಕುರುಬರಕೇರಿ 37 ಪುರುಷನಿಗೆ 47 ವರ್ಷದ ವ್ಯಕ್ತಿಯಿಂದ ಕೊರೊನಾ ಬಂದಿದೆ. ಆವರಗೆರೆ 30 ವರ್ಷದ ಪುರುಷ ಶೀತಜ್ವರ ಎಂದು ಗುರುತಿಸಲಾಗಿದೆ. ಮೆಹಬೂಬ್‌ ನಗರದ 50 ವರ್ಷದ ಪುರುಷ, 19 ವರ್ಷದ ಯುವಕನಿಗೆ ಎಲ್ಲಿಂದ ಬಂದಿದೆ ಎಂಬುದನ್ನು ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ದೇವರಾಜ ಅರಸು ಬಡಾವಣೆಯ 57 ವರ್ಷದ ಮಹಿಳೆಗೆ 61 ವರ್ಷದ ವೃದ್ಧನಿಂದ ಹಾಗೂ ಭಗತ್‌ಸಿಂಗ್‌ ನಗರದ 27 ವರ್ಷದ ಪುರುಷನಿಗೆ 27 ವರ್ಷದ ಯುವಕನ ಸಂಪರ್ಕದಿಂದ ಕೊರೊನಾ ಬಂದಿದೆ.

ಜಗಳೂರು ಅಸಗೋಡು ವೀರಭದ್ರಪ್ಪ ದೇವಸ್ಥಾನದ ಬಳಿಯ 75 ವರ್ಷದ ವೃದ್ಧೆಗೆ ಸೋಂಕು ತಗುಲಿದೆ. ಜಗಳೂರು ಲಿಂಗದಹಳ್ಳಿ ಅರಿಶಿನ ಗುಂಡಿಯ 5 ವರ್ಷದ ಬಾಲಕಿ ಮತ್ತು 27 ವರ್ಷದ ಮಹಿಳೆಗೂ ಸೋಂಕು ಬಂದಿದೆ. ಈ ಮೂವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಹೊನ್ನಾಳಿ ತಾಲ್ಲೂಕಿನ ಹಿರೆಕಲ್ಮಠದ 17 ವರ್ಷದ ಬಾಲಕಿ, ಕಲ್ಕೆರೆಯ 16 ವರ್ಷದ ಬಾಲಕ, ದುರ್ಗಿಗುಡಿಯ 25 ವರ್ಷದ ಯುವಕ, ಎಸ್‌. ಮಲ್ಲಾಪುರದ 23 ವರ್ಷದ ಯುವಕ ಹಾಗೂ ಎಚ್‌.ಜಿ.ಹಳ್ಳಿ 23 ವರ್ಷದ ಯುವಕನಲ್ಲಿ ವೈರಸ್‌ ಕಾಣಿಸಿಕೊಂಡಿದೆ. ಇವರೆಲ್ಲ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಹರಿಹರ ವಿನಾಯಕನಗರದ 32 ವರ್ಷದ ಮಹಿಳೆಗೆ 14 ವರ್ಷದ ಬಾಲಕಿಯ ಸಂಪರ್ಕದಿಂದ ಸೋಂಕು ತಗುಲಿದೆ. ಚನ್ನಗಿರಿ ಕಣಸಾಲು ಬಡಾವಣೆಯ 50 ವರ್ಷದ ಪುರುಷನಿಗೆ ಶೀತಜ್ವರ ಎಂದು ಗುರುತಿಸಲಾಗಿದೆ.

ಬಳ್ಳಾರಿ ಹೊಸಪೇಟೆ ಜೆಪಿನಗರದ 21 ವರ್ಷದ ಯುವತಿ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದು, ವೈರಸ್‌ ಕಾಣಿಸಿಕೊಂಡಿದೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ 633 ಮಂದಿಗೆ ಕೊರೊನಾ ಬಂದಿದೆ. ಬುಧವಾರ 15 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಅವರೂ ಸೇರಿ ಒಟ್ಟು 483 ಮಂದಿ ಗುಣಮುಖರಾಗಿದ್ದಾರೆ. 22 ಮಂದಿ ಮೃತಪಟ್ಟಿದ್ದಾರೆ. 128 ಸಕ್ರಿಯ ಪ್ರಕರಣಗಳಿವೆ. ಅವರಲ್ಲಿ ಐವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT