ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

405 ಮಂದಿಗೆ ಕೊರೊನಾ: ಒಬ್ಬರ ಸಾವು

ಒಂದು ವರ್ಷದ ಹಸುಳೆ ಸೇರಿ 20 ಮಕ್ಕಳು, 36 ಹಿರಿಯರು ಗುಣಮುಖ
Last Updated 15 ಸೆಪ್ಟೆಂಬರ್ 2020, 16:30 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಎರಡನೇ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ 400ರ ಗಡಿ ದಾಟಿದೆ. ಒಬ್ಬರು ಮೃತಪಟ್ಟಿದ್ದಾರೆ.

ಹಾವೇರಿ ಜಿಲ್ಲೆಯ 58 ವರ್ಷದ ವ್ಯಕ್ತಿ ಹೃದಯದ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.

90 ವರ್ಷದ ಇಬ್ಬರು ವೃದ್ಧೆಯರು ಸೇರಿ 405 ಮಂದಿಗೆ ಕೊರೊನಾ ಬಂದಿದೆ. 52 ವೃದ್ಧರು, 24 ವೃದ್ಧೆಯರು, 14 ಬಾಲಕರು, 13 ಬಾಲಕಿಯರೂ ಸೇರಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 183 ಮಂದಿಗೆ ಕೊರೊನಾ ಬಂದಿದೆ. ಆಲೂರಹಟ್ಟಿ, ದೊಡ್ಡಬಾತಿಯಲ್ಲಿ ಐದಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಯರಗುಂಟೆ, ಬಾಡ, ಪುಟಗನಾಳ್‌, ಕೊಡೆರಂಗನಹಳ್ಳಿ, ಕಕ್ಕರಗೊಳ್ಳ, ಲೋಕಿಕೆರೆ, ಆನಗೋಡು, ಅಣಬೇರು, ಮೆಳ್ಳೆಕಟ್ಟೆ, ಕಲಪನಹಳ್ಳಿ, ನಲ್ಕುಂದ, ನರಗನಹಳ್ಳಿ, ಎಲೆಬೇತೂರು, ಹುಚ್ಚವ್ವನಹಳ್ಳಿ ಒಳಗೊಂಡಂತೆ 28 ಮಂದಿ ಗ್ರಾಮೀಣ ಪ್ರದೇಶದವರು. ಉಳಿದ 155 ಮಂದಿ ಮಹಾನಗರ ಪಾಲಿಕೆ ವ್ಯಾಪ್ತಿಯವರು.

ಪೊಲೀಸ್‌ ಕ್ವಾರ್ಟರ್ಸ್‌ನ ಇಬ್ಬರು, ಗ್ರಾಮಾಂತರ ಪೊಲೀಸ್‌ ಠಾಣೆಯ ಒಬ್ಬರು, ಎಸ್‌ಎಸ್‌ಐಎಂಎಸ್‌ ಆಸ್ಪತ್ರೆ, ಸ್ಮಾರ್ಟ್‌ಸಿಟಿ ಕಚೇರಿ, ದಾವಣಗೆರೆ ವಿಶ್ವವಿದ್ಯಾಲಯದ ಒಬ್ಬೊಬ್ಬರು ಸಿಬ್ಬಂದಿಗೆ ಕೊರೊನಾ ಬಂದಿದೆ.

ಎಸ್‌ಎಸ್ ಬಡಾವಣೆ, ಸಿದ್ಧವೀರಪ್ಪ ಬಡಾವಣೆಗಳಲ್ಲಿ 10ಕ್ಕೂ ಅಧಿಕ ಪ್ರಕರಣಗಳು ಕಂಡು ಬಂದಿವೆ. ದೇವರಾಜ ಅರಸು ಬಡಾವಣೆ, ನಿಟುವಳ್ಳಿ, ಎಚ್‌ಕೆಆರ್‌ ಸರ್ಕಲ್‌, ಬಾಲಾಜಿನಗರ, ಸರಸ್ವತಿ ನಗರ ವಿದ್ಯಾನಗರ, ಎಂಸಿಸಿ ‘ಎ’ ಬ್ಲಾಕ್‌, ಎಂಸಿಸಿ ‘ಬಿ’ ಬ್ಲಾಕ್‌, ತರಳಬಾಳು ಬಡಾವಣೆಗಳಲ್ಲಿ 5ಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿವೆ.

ಜಗಳೂರು ತಾಲ್ಲೂಕಿನಲ್ಲಿ 77, ಹರಿಹರ ತಾಲ್ಲೂಕಿನಲ್ಲಿ 72, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 45, ಚನ್ನಗಿರಿ ತಾಲ್ಲೂಕಿನಲ್ಲಿ 24 ಮಂದಿಗೆ ಸೋಂಕು ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಣೆಬೆನ್ನೂರಿನ ಇಬ್ಬರು, ರಾಯಚೂರು, ಚಿತ್ರದುರ್ಗದ ತಲಾ ಒಬ್ಬರಿಗೆ ಕೊರೊನಾ ಬಂದಿದೆ.

226 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಂದು ವರ್ಷದ ಹೆಣ್ಣು ಶಿಶು ಸೇರಿ 10 ಬಾಲಕಿಯರು, 10 ಬಾಲಕರು, 17 ವೃದ್ಧರು, 19 ವೃದ್ಧೆಯರು ಒಳಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 13,627 ಮಂದಿಗೆ ಕೊರೊನಾ ವೈರಸ್‌ ಸೋಂಕು ಬಂದಿದೆ. 10,648 ಮಂದಿ ಗುಣಮುಖರಾಗಿದ್ದಾರೆ. 227 ಮಂದಿ ಗುಣಮುಖರಾಗಿದ್ದಾರೆ. 2,752 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT