ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಒಂದೇ ದಿನ 70 ಪ್ರಕರಣ ಪತ್ತೆ, 4 ಸಾವು

ಜಿಲ್ಲೆಯನ್ನು ಆತಂಕಕ್ಕೆ ದೂಡುತ್ತಿರುವ ಕೊರೊನಾ ಸೋಂಕು ಹೆಚ್ಚಳ
Last Updated 11 ಜುಲೈ 2020, 16:26 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕು ಒಂದೇ ಸಮನೆ ಹೆಚ್ಚಾಗತೊಡಗಿದೆ. ಶನಿವಾರ ಒಂದೇ ದಿನ 70 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದರಲ್ಲಿ ಮೂವರು ಬಾಲಕಿಯರು, ಇಬ್ಬರು ಬಾಲಕರು, ಐವರು ವೃದ್ಧೆಯರು, ಏಳು ಮಂದಿ ವೃದ್ಧರು ಸೇರಿದ್ದಾರೆ. ಇಬ್ಬರು ಮಹಿಳೆಯರು ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ದೇವರಾಜ ಅರಸು ಬಡಾವಣೆಯ 68 ವರ್ಷದ ವೃದ್ಧ ಉಸಿರಾಟದ ಸಮಸ್ಯೆಯಿಂದ ಉಡುಪಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ಎಂಸಿಸಿ ಬಿ ಬ್ಲಾಕ್‌ನ 27 ವರ್ಷದ ಮಹಿಳೆಗೆ ಮತ್ತು ಅವರ ಒಂದು ವರ್ಷದ ಮಗಳಿಗೆ ಸೋಂಕು ಬಂದಿದೆ.ಆಂಜನೇಯ ದೇವಸ್ಥಾನ ರಸ್ತೆಯ 65 ವರ್ಷದ ವೃದ್ಧೆ, ಎಂಸಿಸಿ ಎ ಬ್ಲಾಕ್‌ನ 33 ವರ್ಷದ ಮಹಿಳೆ ಹಾಗೂ ದೊಡ್ಡಬಾತಿಯ 33 ವರ್ಷ ಪುರುಷನಿಗೆ ಶೀತಜ್ವರ (ಐಎಲ್‌ಐ) ಎಂದು ಗುರುತಿಸಲಾಗಿದೆ.

ಮಹಮ್ಮದ್‌ ನಗರದ 62 ವರ್ಷದ ವೃದ್ಧನಿಗೆ, ಚೌಕಿಪೇಟೆಯ 70 ವರ್ಷದ ವೃದ್ಧೆಗೆ ಸೋಂಕು ಇರುವುದು ಖಚಿತವಾಗಿದೆ. ಆವರಗೆರೆಯ 48 ವರ್ಷದ ಪುರುಷನಿಗೆ ಶೀತಜ್ವರ ಎಂದು ಗುರುತಿಸಲಾಗಿದೆ.

ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಕೆಲಸ ಮಾಡುವ 36 ವರ್ಷದ ಪುರುಷನಿಗೆ ರ‍್ಯಾಂಡಮ್‌ ಆಗಿ ಪರೀಕ್ಷೆ ಮಾಡಿದಾಗ ಸೋಂಕು ಇರುವುದು ಪತ್ತೆಯಾಗಿದೆ. ಮಾರಿಕಾಂಬ ದೇವಸ್ಥಾನ ಬಳಿಯ 23 ವರ್ಷದ ಯುವಕ ಮತ್ತು ಅವರ ಪತ್ನಿ 23 ವರ್ಷದ ಮಹಿಳೆಗೆ ಶೀತಜ್ವರ ಉಂಟಾಗಿದೆ.

ಕುರುಬರಕೇರಿಯ 47, 58 ವರ್ಷದ ಪುರುಷರು, 60 ವರ್ಷದ ವೃದ್ಧೆಗೆ 64 ವರ್ಷದನಿಗೆ ಸೋಂಕು ಬಂದಿದೆ. ಡಿಸಿಎಂ ಲೇಔಟ್‌ನ 55 ವರ್ಷದ ಪುರುಷನಿಗೆ ಶೀತಜ್ವರ ಬಂದಿದೆ.

ರಾಣೆಬೆನ್ನೂರಿನ 26 ವರ್ಷದ ಯುವಕ ಶೀತಜ್ವರದಿಂದ ಇಲ್ಲಿನ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನಿಂದ ಬಂದ ಎಂಸಿಸಿ ಎ ಬ್ಲಾಕ್‌ನ 32 ವರ್ಷದ ಯುವಕನ ಸಂಪರ್ಕದಿಂದ 35 ವರ್ಷ ಮತ್ತು 41 ಪುರುಷರಿಗೆ ಕೊರೊನಾ ಬಂದಿದೆ.

ಭಗತ್‌ಸಿಂಗ್‌ ನಗರದ 49 ವರ್ಷದ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆ ಎಂದು ಗುರುತಿಸಲಾಗಿದೆ. ಎಂಸಿಸಿ ಬಿ ಬ್ಲಾಕ್‌ನ 82 ವರ್ಷದ ವೃದ್ಧೆಗೆ ಶೀತಜ್ವರ ಉಂಟಾಗಿದೆ.

ಬೀಡಿ ಲೇಔಟ್‌ನ 38 ವರ್ಷದ ಮಹಿಳೆ ಹಾಗೂ ಕೆಟಿಜೆ ನಗರದ 40 ವರ್ಷದ ಪುರುಷನಿಗೆ 21 ವರ್ಷದ ಗರ್ಭಿಣಿಯ ಸಂಪರ್ಕದಿಂದ ಕೊರೊನಾ ಬಂದಿದೆ.

ಮಹಾರಾಷ್ಟ್ರದಿಂದ ಹಿಂತಿರುಗಿರುವ 3 ವರ್ಷದ ಬಾಲಕಿಗೆ ಸೋಂಕು ಇರುವುದು ದೃಢಪಟ್ಟಿದೆ. ಎಂಸಿಸಿ ಬಿ ಬ್ಲಾಕ್‌ನ ಆರೋಗ್ಯ ಕಾರ್ಯಕರ್ತರಾಗಿರುವ 25 ವರ್ಷದ ಯುವಕನಿಗೂ ಸೋಂಕು ತಗುಲಿದೆ. ಆಜಾದ್‌ನಗರದ 72 ವರ್ಷದ ವೃದ್ಧನಿಗೆ ನಾಲ್ಕು ದಿನಗಳ ಹಿಂದೆ ಮೃತಪಟ್ಟಿರುವ 68 ವರ್ಷದ ವೃದ್ಧನ ಸಂಪರ್ಕದಿಂದ ವೈರಸ್‌ ತಗುಲಿದೆ.

ಬಸವರಾಜ ‍ಪೇಟೆಯ 38 ವರ್ಷದ ಪುರುಷನಿಗೆ ಹಗೆದಿಬ್ಬದ 68 ವರ್ಷದ ವೃದ್ಧನ ಸಂಪರ್ಕ ಸೋಂಕು ತಂದಿದೆ.

ಬಿ. ಕಲಪನಹಳ್ಳಿಯ 55 ವರ್ಷದ ಮಹಿಳೆ, ಬೇತೂರು ರಸ್ತೆಯ 30 ಮತ್ತು 39 ವರ್ಷದ ಪುರುಷರಿಗೆ, ಬೆಂಗಳೂರಿನಿಂದ ಹಿಂತಿರುಗಿರುವ 33 ವರ್ಷದ ವ್ಯಕ್ತಿಗೆ ಶೀತಜ್ವರ ಎಂದು ಗುರುತಿಸಲಾಗಿದೆ.

ನರಸರಾಜಪೇಟೆಯ 52 ಮತ್ತು 21, 30 ವರ್ಷದ ಮಹಿಳೆಯರಿಗೆ, 7 ವರ್ಷದ ಬಾಲಕನಿಗೆ ಶೀತಜ್ವರ ಬಂದಿದೆ. 48 ವರ್ಷದ ಪುರುಷನಿಗೆ 46 ವರ್ಷದ ವ್ಯಕ್ತಿಯ ಸಂಪರ್ಕ ಕೊರೊನಾ ತಂದಿದೆ.

ಜಗಳೂರು ತಾಲ್ಲೂಕಿನ 7 ಮಂದಿಗೆ ಕೊರೊನಾ ಬಂದಿದೆ. ತೋರಣಘಟ್ಟದ 32 ವರ್ಷದ ಪುರುಷ ಜಿಲ್ಲೆಯೊಳಗೆ ಪ್ರಯಾಣ ಬೆಳೆಸಿರುವುದರಿಂದ ಸೋಂಕು ತಗುಲಿದೆ. 55 ವರ್ಷದ ಮಹಿಳೆ, 25 ವರ್ಷದ ಯುವತಿಗೆ ಸೋಂಕು ಬಂದಿದೆ. ತೋರಣಘಟ್ಟದ 19 ವರ್ಷದ ಯುವಕ, 22 ವರ್ಷದ ಯುವತಿಗೂ ವೈರಸ್‌ ತಗುಲಿದೆ. 29 ವರ್ಷದ ಯುವಕರಿಗೆ ಶೀತಜ್ವರ ಎಂದು ಗುರುತಿಸಲಾಗಿದೆ. ಜಗಳೂರು ರಾಮಾಲಯದ 63 ವರ್ಷದ ವೃದ್ಧನಿಗೆ ತೀವ್ರ ಉಸಿರಾಟದ ತೊಂದರೆ ಎಂದು ಗುರುತಿಸಲಾಗಿದೆ.

ಚನ್ನಗಿರಿ ತಾಲ್ಲೂಕಿನ 10 ಮಂದಿಗೆ ಸೋಂಕು ಇದೆ. ರಾಜಗೊಂಡನಹಳ್ಳಿ ತಾಂಡಾದ 23 ವರ್ಷದ ಯುವತಿಗೆ ವೈರಸ್‌ ಬಂದಿದೆ. ಮೆದಿಕೆರೆಯ 22 ವರ್ಷದ ಯುವಕ, ಕೊಂಡದಹಳ್ಳಿಯ 28 ವರ್ಷದ ಯುವಕ, ಹೊದಿಗೆರೆಯ 41 ವರ್ಷದ ಪುರುಷ, ಹಿರೆಕೋಗಲೂರಿನ 65 ವರ್ಷ ವೃದ್ಧೆ ಮತ್ತು ದಿಗ್ಗೇನಹಳ್ಳಿಯ 46 ವರ್ಷದ ಮಹಿಳೆಗೆ ಶೀತಜ್ವರ ಬಂದಿದೆ. ಮಠದ ಬೀದಿಯ 57 ವರ್ಷದ ಮಹಿಳೆ ಮತ್ತು 2 ವರ್ಷದ ಬಾಲಕಿಗೆ ಅಲ್ಲಿನ 60 ವರ್ಷದ ವೃದ್ಧೆಯ ಸಂಪರ್ಕದಿಂದ ಕೊರೊನಾ ಬಂದಿದೆ. ಕುಂಬಾರಬೀದಿಯ 31 ವರ್ಷದ ಪುರುಷ, 28 ವರ್ಷದ ಮಹಿಳೆಗೆ ಅಲ್ಲಿನ 60 ವರ್ಷದ ವೃದ್ಧೆಯ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ.

ಹರಿಹರ ತಾಲ್ಲೂಕಿನ 7 ಮಂದಿಗೆ ವೈರಸ್‌ ತಗುಲಿದೆ. ಹರ್ಲಾಪುರದ 48 ವರ್ಷದ ಪುರುಷನಿಗೆ ಎಲ್ಲಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. 42 ವರ್ಷದ ಮಹಿಳೆಯನ್ನು ತೀವ್ರ ಉಸಿರಾಟದ ತೊಂದರೆ (ಸಾರಿ) ಎಂದು ಗುರುತಿಸಲಾಗಿದೆ. ಗಾಂಧಿನಗರದ 34 ವರ್ಷದ ಪುರುಷನ ಸಂಪರ್ಕದಿಂದ 32 ವರ್ಷದ ಪುರುಷನಿಗೆ ವೈರಸ್ ತಗುಲಿದೆ. ಗಂಗನರಸಿಗೆ ತೆಲಂಗಾಣದಿಂದ ಹಿಂತಿರುಗಿರುವ 25 ವರ್ಷದ ಮಹಿಳೆ, ಅವರ ಎರಡು ವರ್ಷದ ಮಗಳಿಗೆ ಸೋಂಕು ತಗುಲಿದೆ. ತಗ್ಗಿನಕೆರೆಯ 20 ವರ್ಷದ ಯುವಕನಿಗೆ ಶೀತಜ್ವರ ಉಂಟಾಗಿದೆ. ಕೊಂಡಜ್ಜಿಯ 24 ವರ್ಷದ ಯುವಕನಿಗೆ ಎಂಸಿಸಿ ಎ ಬ್ಲಾಕ್‌ನ 73 ವರ್ಷದ ವೃದ್ಧನ ಸಂಪರ್ಕದಿಂದ ವೈರಸ್‌ ತಗುಲಿದೆ.

ಹೊನ್ನಾಳಿ ತಾಲ್ಲೂಕಿನ 7 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. 35 ವರ್ಷದ ಪುರುಷ, ತಗ್ಗಿನಹಳ್ಳಿಯ 19 ವರ್ಷದ ಯುವಕ, ಅಕ್ಕಸಾಲಿ ಬೀದಿಯ 49 ವರ್ಷದ ಪುರುಷನಿಗೆ ಶೀತ್ವಜ್ವರ, ಟಿ.ಎಂ. ರಸ್ತೆಯ 54 ವರ್ಷದ ಪುರುಷ, ಎ.ಕೆ. ಕಾಲೊನಿಯ 35 ವರ್ಷದ ಮಹಿಳೆ, 39 ವರ್ಷದ ಪುರುಷರಿಗೆ ರ‍್ಯಾಂಡಂ ಆಗಿ ಪರೀಕ್ಷೆ ನಡೆಸುವಾಗ ಸೋಂಕು ಇರುವುದು ಪತ್ತೆಯಾಗಿದೆ. ಕ್ಯಾಸಿನಕೆರೆಯ 48 ವರ್ಷದ ಪುರುಷನಿಗೆ 63 ವರ್ಷದ ವೃದ್ಧನ ಸಂಪರ್ಕದಿಂದ ಬಂದಿದೆ.

ನಾಲ್ವರು ಸಾವು

ಉಡುಪಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇವರಾಜ ಅರಸು ಬಡಾವಣೆಯ 70 ವರ್ಷದ ವೃದ್ಧ ಶನಿವಾರ ಮೃತಪಟ್ಟಿದ್ದಾರೆ.ಜಾಲಿನಗರ 57 ವರ್ಷದ ಮಹಿಳೆ, ರಾಣೆಬೆನ್ನೂರಿನ ಹಳಗೇರಿ ರಸ್ತೆಯ 53 ವರ್ಷದ ಪುರುಷ ಮತ್ತು ಎನ್‌.ಆರ್‌. ರಸ್ತೆಯ 62 ವರ್ಷದ ವೃದ್ಧೆ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕ್ರಮವಾಗಿ ಜುಲೈ 8, 9 ಮತ್ತು 10ರಂದು ಮೃತಪಟ್ಟರು. ಮೊದಲ ಮೂವರಿಗೆ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಎನ್‌.ಆರ್‌, ರಸ್ತೆಯ ವೃದ್ಧೆಗೆ ಚೌಕಿಪೇಟೆಯ 46 ವರ್ಷದ ಪುರುಷನ ಸಂಪರ್ಕದಿಂದ ಸೋಂಕು ತಗುಲಿತ್ತು. ಈ ನಾಲ್ವರೂ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಇದ್ದವರು ಎಂದು ಗುರುತಿಸಲಾಗಿದೆ.

ಶಾಮನೂರು ಮನೆ ಸಿಬ್ಬಂದಿಗೆ ಸೋಂಕು?

ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಪ್ತ ಸಹಾಯಕ, ಅಡುಗೆಯವರಿಬ್ಬರು, ಅವರ ಆರೋಗ್ಯ ನೋಡಿಕೊಳ್ಳುವ ಪುರುಷ ನರ್ಸ್‌, ಎಸ್‌.ಎಸ್‌ ಮಲ್ಲಿಕಾರ್ಜುನ್‌ ಜತೆ ಇರುವ ಇಬ್ಬರಿಗೆ ಕೊರೊನಾ ಬಂದಿದೆ ಎಂದು ಶಾಸಕರ ಆಪ್ತ ವಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT