ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ ಪಾಲರ ವಿದ್ಯಾಸಂಸ್ಥೆಗೆ 75 ವರ್ಷ: ವೆಬ್‌ಸೈಟ್‌ ಲೋಕಾರ್ಪಣೆ

Last Updated 11 ಮಾರ್ಚ್ 2021, 2:45 IST
ಅಕ್ಷರ ಗಾತ್ರ

ದಾವಣಗೆರೆ: ಸಂತ ಪಾಲರ ಸಂಸ್ಥೆಗೆ 75 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಸಂತ ಪಾಲರ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ವೆಬ್‌ಸೈಟ್‌ ಲೋಕಾರ್ಪಣೆ ಮಾಡಲಾಯಿತು.

www.stpaulsinstitution.com ಎಂಬ ಹೆಸರಿನ ವೆಬ್‌ಸೈಟ್ ಅನ್ನು ಲೋಕಾರ್ಪಣೆ ಮಾಡಿದ ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಅನುಪಮಾ ಮಾತನಾಡಿ, ‘ಸಂತ ಪಾಲರ ಶಿಕ್ಷಣ ಸಂಸ್ಥೆಯು ಹಳೇ ಮತ್ತು ಎಲ್ಲ ವಿದ್ಯಾರ್ಥಿಗಳ ಸಾಧನೆ ಮಾಹಿತಿಗಳನ್ನು ಸೇರಿಸಲಾಗಿದೆ. ವೆಬ್‌ಸೈಟ್‌ನಲ್ಲಿ ಸಂಸ್ಥೆಯ ಇತಿಹಾಸ, ಶಾಲೆಯ ಸಾಧನೆಗಳು, ಹಳೇ ವಿದ್ಯಾರ್ಥಿಗಳ ವಿಳಾಸ ಹಾಗೂ ದೂರವಾಣಿ ಸಂಖ್ಯೆ, ವಿದ್ಯಾರ್ಥಿಗಳ ಹೊಸ ನೋಂದಣಿಗೆ ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ಕೋವಿಡ್‌–19 ಇರುವ ಕಾರಣದಿಂದ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಮುಂದಿನ ವರ್ಷ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಶಿಕ್ಷಕಿ ಎಂ.ಕೆ. ಮಂಜುಳಾ, ‘ಸಂಸ್ಥೆಯಲ್ಲಿ ಕಲಿತ 45 ಸಾವಿರ ವಿದ್ಯಾರ್ಥಿಗಳ ಅನುಭವ ಮತ್ತು ಸಾಧನೆಗಳನ್ನು ಒಟ್ಟುಗೂಡಿಸಿ ಈ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ದೇಶ, ವಿದೇಶಗಳಲ್ಲಿರುವ ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಇದರಿಂದ ಸಾಧ್ಯವಾಗಲಿದೆ. ಮುಂದಿನ ವರ್ಷದ ಅಮೃತ ಮಹೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಹಳೇ ವಿದ್ಯಾರ್ಥಿಗಳು ಬರಲಿದ್ದಾರೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಸ್ಟರ್ ಬರ್ನಿ, ಸಿಸ್ಟರ್ ರೀನಿ, ಸಿಸ್ಟರ್ ಸುಜಯಾ, ಸಿಸ್ಟರ್ ನಿರ್ಮಲಾ, ರಾ‌ಧಾ, ಮಾಲತಿ, ಹಳೇ ವಿದ್ಯಾರ್ಥಿನಿಯರಾದ ಡಾ. ಶುಕ್ಲ ಶೆಟ್ಟಿ, ವಸಂತಿ ಪಲ್ಲಾಗಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT