ಸೋಮವಾರ, ಮೇ 23, 2022
30 °C
ಐರ್ಲೆಂಡ್‌ನಲ್ಲಿ ಯುಗಾದಿ ಸಂಭ್ರಮ

ನೆಲದ ಸಂಸ್ಕೃತಿಯ ಬಿಂಬಿಸುವ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು: ಐರ್ಲೆಂಡ್‌ನ ಡಬ್ಲಿನ್ ನಗರದಲ್ಲಿ ನೆಲೆಸಿರುವ ಕನ್ನಡಿಗರ ‘ಕನ್ನಡ ಕಲಿ’ ಸಂಘವು ಯುಗಾದಿ ಅಂಗವಾಗಿ ಭಾನುವಾರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿತ್ತು.

‘ನಮ್ಮ ಮಕ್ಕಳಿಗೂ ಕನ್ನಡದ ಕಂಪು ಬೀರಬೇಕು. ಪಾಶ್ಚಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗಿ ನಮ್ಮ ಮೂಲ ಸಂಸ್ಕೃತಿ ಮರೆಯಬಾರದು. ಭಾರತದಲ್ಲಿ ನೆಲೆಸಿರುವ ಅಜ್ಜ, ಅಜ್ಜಿಯರೊಂದಿಗೆ ಕನ್ನಡದಲ್ಲಿ ಸಂಭಾಷಣೆ ನಡೆಸಬೇಕು ಎಂಬ ಉದ್ದೇಶದಿಂದ ‘ಕನ್ನಡ ಕಲಿ’ ಸಂಘ ಸ್ಥಾಪಿಸಲಾಗಿದೆ. ಆ ಮೂಲಕ ಸಾಂದರ್ಭಿಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ’ ಎಂದು ಡಬ್ಲಿನ್‌ ನಗರದಲ್ಲಿ ನೆಲೆಸಿರುವ ಸಾಫ್ಟ್‌ವೇರ್‌ ಎಂಜಿನಿಯರ್, ತಣಿಗೆರೆ ಗ್ರಾಮದ ಕಾಂತೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲರೂ ಸಂಘಟಿತರಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಂಚಿಕೊಳ್ಳಲು ಯುಗಾದಿ ಸಂಭ್ರಮ ಆಚರಿಸಲಾಯಿತು. ಯುಗಾದಿ ವಿಶೇಷತೆ ಬಗ್ಗೆ ಸುಧಮ್ಮ ವಿವರಿಸಿದರು. ಕನ್ನಡ ಹಾಡುಗಳಿಗೆ ರೋಚನಾ ಕಾಂತೇಶ್, ಧೃತಿ ಪ್ರಶಾಂತ್, ಧೃವ ಪ್ರಶಾಂತ್, ವಾಗ್ಮಿ ಮಂಜುನಾಥ್, ಆಧ್ಯಾ ರೇವಣ ಸಿದ್ದು ನೃತ್ಯ ಮಾಡಿದರು. ಜಾನಪದ ಗೀತೆ, ಶ್ಲೋಕ ಹಾಗೂ ಭಾವ ಗೀತೆಗಳನ್ನು ಸುಧಾ, ದಿಶಾ, ದಿವ್ಯಾ ಭಟ್, ನಂದಿನಿ ಹಾಡಿದರು. ನಾಗಲಾಂಬಿಕಾ ಪಾತ್ರಾಭಿನಯ ಮಾಡಿದರು. ಹನುಮಾನ್, ರಾಮನ ವೇಷಧಾರಿಗಳು ಗಮನ ಸೆಳೆದರು. ಪುನೀತ್ ರಾಜ್‌ಕುಮಾರ್ ಅಭಿನಯದ ಬೊಂಬೆ ಹೇಳುತೈತೆ ಗೀತೆಯನ್ನು ಸುಶ್ರಾವ್ಯವಾಗಿ ಹಾಡಲಾಯಿತು’ ಎಂದು ಅವರು ವಿವರಿಸಿದರು. ಚೈತ್ರ ಹಾಗೂ ಚಂದನಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು