ಸೋಮವಾರ, ಆಗಸ್ಟ್ 8, 2022
22 °C

ಪೊಲೀಸರಿಗೆ, ಸಾರ್ವಜನಿಕರಿಗೆ ಆಹಾರ ವಿತರಿಸಿದ ಫೋಟೊಗ್ರಾಫರ್ಸ್‌ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲಾ ಫೋಟೊಗ್ರಾಫರ್ ಮತ್ತು ವಿಡಿಯೊಗ್ರಾಫರ್ ಸಂಘ, ದಾವಣಗೆರೆ ತಾಲ್ಲೂಕು ಫೋಟೊಗ್ರಾಫರ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಹಾಗೂ ಅನ್ಯ ಸ್ಥಳದಿಂದ ಬಂದ ಸಾರ್ವಜನಿಕರಿಗೆ ಹೋಳಿಗೆ ಮತ್ತು ಚಿತ್ರನ್ನ, ನೀರನ್ನು ಶನಿವಾರ ವಿತರಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ನಿಮ್ಮ ಕಷ್ಟದ ಮಧ್ಯೆ ಇನ್ನೊಬ್ಬರ ಹಸಿವು ನೀಗಿಸುವ ಕೆಲಸ ಮಾಡಿದ್ದೀರಿ’ ಎಂದು ಶ್ಲಾಘಿಸಿದರು.

ಎಎಸ್‌ಪಿ ಎಂ. ರಾಜೀವ್ ಹಾಗೂ ತಹಶೀಲ್ದಾರ್ ಗಿರೀಶ್, ಮೇಯರ್ ಎಸ್ ಟಿ ವೀರೇಶ್, ರೈತ ಮುಖಂಡ ಲೋಕಿಕೆರೆ ನಾಗರಾಜ್ ಸಂಘದ ಜಿಲ್ಲಾ ಅಧ್ಯಕ್ಷ ವಿಜಯ್ ಜಾಧವ್ ಯೂತ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಕೆ.ಸಿ. ರಾಜು ಎಸ್‌.ಆರ್. ತಿಪ್ಪೇಸ್ವಾಮಿ, ಶ್ರೀನಾಥ್ ಪಿ. ಅಗಡಿ, ಕೆ.ಪಿ. ನಾಗರಾಜ್, ದುಗ್ಗೇಶ್, ಅರುಣ್ ಕುಮಾರ್, ಮಹಾಂತೇಶ್, ಮಲ್ಲಿಕಾರ್ಜುನ್, ಮಿಥುನ್, ಪ್ರಕಾಶ್, ರುದ್ರಮ್ಮ, ವಿವೇಕ್‌ ಬದ್ದಿ ಅವರೂ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು