ಶನಿವಾರ, ಜೂನ್ 25, 2022
21 °C

ಮಾದಕ ವಸ್ತು ಸೇವನೆ ವಿರುದ್ಧ ಸಹಿ ಸಂಗ್ರಹ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಶಾ ಮುಕ್ತ’ ಭಾರತ ಜಾಗೃತಿ ಅಭಿಯಾನದ ಅಂಗವಾಗಿ ಎಬಿವಿಪಿಯ ಜಿಲ್ಲಾ ಶಾಖೆಯಿಂದ ನಗರದ ರಾಮ್ ಅಂಡ್ ಕೊ ವೃತ್ತದಲ್ಲಿ ಮಾದಕ ವಸ್ತು ಸೇವನೆ ವಿರುದ್ಧ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಲಾಯಿತು.

‘ಎಬಿವಿಪಿ 2015ರಿಂದಲೂ ಡ್ರಗ್ಸ್‌ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದು, ದುರದೃಷ್ಟವಶಾತ್ ಸರ್ಕಾರ ನಮ್ಮ ಮನವಿಯನ್ನು ಕೇಳಿಸಿಕೊಳ್ಳಲಿಲ್ಲ. ಈ ಜಾಲದಲ್ಲಿ ಅನೇಕ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಇದನ್ನು ಈ ದೇಶದಿಂದಲೇ ಹೊರ ಹಾಕಬೇಕು’ ಎಂದು ಪರಿಷತ್ ಪದಾಧಿಕಾರಿಗಳು ಮನವಿ ಮಾಡಿದರು.

‘ಚಲನಚಿತ್ರ ನಟಿಯರು ಹಾಗೂ ಉದ್ಯಮಿಗಳು ಹಾಗೂ ರಾಜಕಾರಣಿ ಮಕ್ಕಳು ಮಾದಕ ವ್ಯಸನದಲ್ಲಿ ಭಾಗಿಯಾಗಿರುವುದು ನಾಚಿಕೆಗೇಡಿನ ಸಂಗತಿ. ವೈದ್ಯಕೀಯ ಕಾಲೇಜುಗಳ ಮುಗ್ಧ ವಿದ್ಯಾರ್ಥಿಗಳೂ ಬಲಿಯಾಗುತ್ತಿದ್ದಾರೆ. ವೈದ್ಯಕೀಯ ಕಾಲೇಜುಗಳಲ್ಲಿ ಡ್ರಗ್ ಮಾಫಿಯಾ ಅವ್ಯಾಹತವಾಗಿ ಬೆಳೆದಿದೆ. ಇದು ಪೊಲೀಸ್ ಇಲಾಖೆಗೂ ತಿಳಿದಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಕಾರ್ಯ ಸಮಿತಿ ಸದಸ್ಯೆ ಭವ್ಯಶ್ರೀ, ನಗರ ಕಾರ್ಯದರ್ಶಿ ಆಕಾಶ ಇಟಗಿ ಹಾಗೂ ಸುಮನ್ ನಿತಿನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು