ದಾವಣಗೆರೆ: ಕುದುರೆ ತಡಿ ನೀಡುವುದಾಗಿ ದರ್ಶನ್ ನೀಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಮಂಗಳವಾರ ದರ್ಶನ್ ತಡಿ ಅರ್ಪಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ರಾಬರ್ಟ್ ಸಿನಿಮಾದ ಪ್ರೀ ರಿಲೀಸಿಂಗ್ ಇವೆಂಟ್ ಮುಗಿಸಿದ ನಟ ದರ್ಶನ್ ದಾವಣಗೆರೆಗೆ ಬಂದು ಮಲ್ಲಿಕಾರ್ಜುನ ಅವರನ್ನು ಭೇಟಿಯಾದರು. ಅತಿಥಿ ಗೃಹಕ್ಕೆ ತೆರಳಿದ ವೇಳೆ ನಟರಾದ ಚಿಕ್ಕಣ್ಣ, ವಿನೋದ್ ಪ್ರಭಾಕರ್, ರವಿಶಂಕರ್ ಕೂಡ ಜೊತೆಗಿದ್ದರು.

ಮೊದಲಿನಿಂದಲೂ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ನಟ ದರ್ಶನ್ ಆಪ್ತರಾಗಿದ್ದು, ಕಳೆದ ಬಾರಿ ದರ್ಶನ್‌ಗೆ ಮಲ್ಲಿಕಾರ್ಜುನ್ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು.

ಅಮೆರಿಕದಿಂದ ತಂದ್ದಿದ ಕುದುರೆಯ ತಡಿ (ಜೀನ್)ಯನ್ನು ಉಡುಗೊರೆಯಾಗಿ ನೀಡಿದರು.ನಂತರ ಮಲ್ಲಿಕಾರ್ಜುನ್ ಒಡೆತನದ ಮುದೋಳದ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 20 ಲಕ್ಷ ಟನ್ ಕಬ್ಬ ಅರೆದಿದ್ದು, ಮಲ್ಲಿಕಾರ್ಜುನ ಅವರನ್ನು ದರ್ಶನ್ ಅವರು ರೈತರ ಪರವಾಗಿ ಸನ್ಮಾನಿಸಿದರು.

ಪಾಲಿಕೆಯ ಸದಸ್ಯ ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಬಿ.ಕೆ.ಪರಶುರಾಮ, ಅಭಿಮಾನಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.