ಅರಸೀಕೆರೆ (ಉಚ್ಚಂಗಿದುರ್ಗ): ಚಿತ್ರ ನಟ ಸುದೀಪ್ ಅವರ ಜನ್ಮದಿನದ ಅಂಗವಾಗಿ ಅಖಿಲ ಭಾರತ ಬಾದ್ಷಾ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದಿಂದ ಅರಸೀಕೆರೆಯ ಶಾಂತ ಪ್ರಕಾಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳಿಗೆ ಬಣ್ಣ ಬಳಿದಿದ್ದಾರೆ.

₹ 15 ಸಾವಿರ ವೆಚ್ಚ ಮಾಡಿ 8 ಅಭಿಮಾನಿಗಳು ಶಾಲೆಗೆ ಬಣ್ಣ ಬಳಿದಿದ್ದು, ಶಾಲೆಗೆ ಮೆರುಗು ಬಂದಿದೆ.

ಶನಿವಾರ ನಡೆದ ಕಾರ್ಯಕ್ರಮವನ್ನು ಸಂಘದ ರಾಜ್ಯ ಘಟಕದ ಅಧ್ಯಕ್ಷ ನವೀನ್ ಗೌಡ, ಉಪಾಧ್ಯಕ್ಷ ಜಗದೀಶ್ ಉದ್ಘಾಟಿಸಿದರು.

ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರ ವೈ.ಡಿ. ಅಣ್ಣಪ್ಪ

ಅವರ ಪುತ್ರರು ಕೇಕ್ ಕತ್ತರಿಸುವ ಮೂಲಕ ನೆಚ್ಚಿನ ನಟನಿಗೆ ಶುಭ ಹಾರೈಸಿದರು. ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು. ಅನ್ನ ಸಂತರ್ಪಣೆಯೂ ನಡೆಯಿತು.

ಹಾದಿಮನೆ ಸಂತೋಷ್, ಚಂದನ, ಮಿಂಚು, ಪ್ರೀತಮ್, ಸಾನ್ವಿ, ಪ್ರಶಾಂತ್ ಪಾಟೀಲ್, ಫಣಿಯಾಪುರ ಲಿಂಗರಾಜ, ಕೆಂಚನಗೌಡ, ಕೊಟ್ರೇಶ್, ನವೀನ್, ಶಶಿ, ಪರಸಪ್ಪ, ಮರಿಯಪ್ಪ ಇದ್ದರು.

ಆಯ್ಕೆ: ಅಖಿಲ ಭಾರತ ಬಾದ್ಷಾ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅರಸೀಕೆರೆ ಗ್ರಾಮದ ಹಾದಿಮನೆ ಸಂತೋಷ್ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.