ಭಾನುವಾರ, ಆಗಸ್ಟ್ 1, 2021
27 °C
ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ

ಎಸಿಗಳಿಂದ ಹಣ ವಸೂಲಿ ದಂಧೆ ತಪ್ಪಿಸಲು ತಿದ್ದುಪಡಿ: ಸಚಿವ ಸೋಮಶೇಖರ್ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕರ್ನಾಟಕ ಭೂ ಸುಧಾರಣಾ ಕಾಯ್ದೆಯಿಂದ ಯಾವುದೇ ಅನುಕೂಲಗಳು ಇರಲಿಲ್ಲ. ಬದಲಾಗಿ ಅಸಿಸ್ಟೆಂಟ್ ಕಮೀಷನರ್‌ಗಳಿಗೆ ಹಣ ವಸೂಲಿ ಮಾಡಿಕೊಳ್ಳುವ ದಂಧೆಯಾಗಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಯಿತು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ಸಮರ್ಥಿಸಿಕೊಂಡರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಬಗ್ಗೆ ಜನರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಿ ತಿದ್ದುಪಡಿ ತರುವ ತೀರ್ಮಾನ ಕೈಗೊಳ್ಳಲಾಯಿತು. 5 ಗುಂಟೆ ಜಮೀನು ಖರೀದಿ ಮಾಡಿದರೆ ಎರಡು ಮೂರು ತಿಂಗಳಲ್ಲಿ ನೋಟಿಸ್ ಕೊಡುತ್ತಿದ್ದರು. ಅಲ್ಲದೇ 79 ಎ, 79ಬಿ ಅಡಿಯಲ್ಲಿ ಒಂದು ಗುಂಟೆ ಸರ್ಕಾರ ವಶಪಡಿಸಿಕೊಂಡ ನಿದರ್ಶನಗಳು ಇಲ್ಲ. ಈ ಕಾಯ್ದೆ ಉಪಯೋಗವಿರಲಿಲ್ಲ. ಹಾಗಾಗಿಯೇ ಇದು ಒಳ್ಳೆಯ ನಿರ್ಧಾರ’ ಎಂದರು.

‘ತಮಿಳುನಾಡು, ತೆಲಂಗಾಲ ಹಾಗೂ ಆಂಧ್ರಪ್ರದೇಶ ಸೇರಿ ಯಾವ ರಾಜ್ಯದಲ್ಲೂ ಈ ಕಾಯ್ದೆ ಇಲ್ಲ. ರಾಜ್ಯದಲ್ಲಿ ಮಾತ್ರ ಇತ್ತು. ಹಾಗಾಗಿ ಸಮಸ್ಯೆ ಇಲ್ಲ’ ಎಂದು ಮತ್ತೊಬ್ಬ ಸಚಿವ ಬೈರತಿ ಬಸವರಾಜ್ ಸಮರ್ಥಿಸಿಕೊಂಡದರು.

ವಿಧಾನಪರಿಷತ್ ಸದಸ್ಯ ಸ್ಥಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಂ.ಟಿ.ಬಿ. ನಾಗರಾಜ್ ಒಬ್ಬರಿಗೆ ಅಲ್ಲ. ಎಚ್‌.ವಿಶ್ವನಾಥ್, ಆರ್‌.ಶಂಕರ್ ಹಾಗೂ ರೋಷನ್‌ಬೇಗ್ ಅವರಿಗೂ ವಿಧಾನಪರಿತ್‌ಗೆ ಟಿಕೆಟ್ ನೀಡಬೇಕು’ ಎಂದು ಎಸ್‌.ಟಿ. ಸೋಮಶೇಖರ್ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು