ಮಂಗಳವಾರ, ಜನವರಿ 21, 2020
28 °C

ಭೀಮಾ ಕೋರೆಗಾಂವ್ 202ನೇ ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಭೀಮಾ ಕೋರೆಗಾಂವ್‌ನ 202ನೇ ವಿಜಯೋತ್ಸವದ ಪ್ರಯುಕ್ತ ದಲಿತ ಸಂಘರ್ಷ ಸಮಿತಿಯಿಂದ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

‘ಭಾರತದ ಇತಿಹಾಸದಲ್ಲಿ ನಡೆದಿರುವ ವಿವಿಧ ಯುದ್ದಗಳಲ್ಲಿ ರಾಜರು, ಬ್ರಿಟಿಷರು, ಡಚ್ಚರು, ಪ್ರೆಂಚರ ವಿರುದ್ಧ ಸಾಮ್ರಾಜ್ಯಶಾಹಿಗಳು ನಡೆಸಿರುವ ಬಗ್ಗೆ ಅಷ್ಟೇ ಚರಿತ್ರೆಯಲ್ಲಿ ದಾಖಲಾಗುತ್ತದೆ. ಆದರೆ ಶೋಷಕರ ವಿರುದ್ಧ  ಶೋಷಿತರು ಯುದ್ದ ನಡೆಸಿ ಗೆಲವು ಸಾಧಿಸಿದ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ’ ಎಂದು ಆರೋಪಿಸಿದರು.

‘ಭೀಮಾನದಿಯ ತೀರದಲ್ಲಿ ಕೋರೆಗಾವ್ ರಣಾಂಗಣದಲ್ಲಿ ಬಾಂಬೆ ರೆಜಿಮೆಂಟ್‌ನ 500 ಅಸ್ಪೃಶ್ಯ ಸೈನಿಕರು ಮರಾಠ ಪೇಶ್ವೆಗಳ ಬೃಹತ್ ಸೇನೆಯ ವಿರುದ್ಧ 1818ರಲ್ಲಿ ಹೋರಾಡಿ ವಿಜೇತರಾದ ಕೋರೆಗಾವ್ ಕದನದ ದಿನವನ್ನು ವಿಜಯೋತ್ಸವದ ದಿನವನ್ನಾಗಿ ಆಚರಿಸಲಾಗುತ್ತದೆ’ ಎಂದರು.

ರಾಜ್ಯ ಸಂಚಾಲಕ ಎಚ್. ಮಲ್ಲೇಶ್, ಹನುಮಂತಪ್ಪ, ವೆಂಕಟೇಶ್ ಬಾಬು, ಮಲ್ಲಿಕಾರ್ಜುನ್, ಹಾಲಮ್ಮ ಜ್ಯೋತಿ ಕೊಟ್ರೇಶ್, ಎಂ. ಚಂದ್ರಪ್ಪ, ಮಲ್ಲಪ್ಪ, ಅಂಜಿನಪ್ಪ ನೀಲಗುಂದ, ಶಿವಕುಮಾರ್, ಲೋಕೇಶ್, ಹನುಮಂತಪ್ಪ, ನಾಗರಾಜ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು