ಗುರುವಾರ , ಫೆಬ್ರವರಿ 27, 2020
19 °C

ಕಾರು ಡಿಕ್ಕಿ: ಬೈಕ್‌ ಹಿಂಬದಿ ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬೈಕ್‌ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಬೈಕ್‌ ಹಿಂಬದಿ ಸವಾರ ಮೃತಪಟ್ಟಿದ್ದಾರೆ. ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹರಿಹರ ತಾಲ್ಲೂಕು ಕೆ.ಬೇವಿನಹಳ್ಳಿ ಗ್ರಾಮದ ಜಿ. ಶಂಭುಲಿಂಗಪ್ಪ (55) ಮೃತಪಟ್ಟವರು. ಅವರ ಮಗ ಜಿ.ಎಸ್‌. ವಿನಾಯಕ (25) ಗಾಯಗೊಂಡವರು. ವಿನಾಯಕ ಬೈಕಲ್ಲಿ ತನ್ನ ತಂದೆಯನ್ನು ಕೂರಿಸಿಕೊಂಡು ಬುಧವಾರ ಸಂಜೆ ದಾವಣಗೆರೆಗೆ ಬಂದಿದ್ದರು. ಬಾಪೂಜಿ ಸಮುದಾಯ ಭವನದ ಬಳಿ ಇರುವ ಸ್ಮಾರ್ಟ ಸಿಟಿ ಆಫೀಸ್ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿದೆ. ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಡಹಗಲೇ ಕಳವು

ದಾವಣಗೆರೆ: ಹಾಡಹಗಲೇ ಮನೆಗೆ ನುಗ್ಗಿರುವ ಕಳ್ಳರು ₹1.41 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹3,500 ನಗದು ಕಳವು ಮಾಡಿದ್ದಾರೆ.

 ಇಲ್ಲಿನ ರಾಜೀವ್‌ಗಾಂಧಿ ಬಡಾವಣೆಯ ಶರಣಪ್ಪ ಬುಧವಾರ ಮಧ್ಯಾಹ್ನದ ಬಳಿಕ ಚಕ್ಕುಲಿ, ಖಾರಾ ಮಾರಾಟ ಮಾಡಲು ಹೋಗಿದ್ದರು. ಅವರ ಮಗ ಮಂಜುನಾಥ ಮನೆಗೆ ಬೀಗ ಹಾಕಿಕೊಂಡು ಪಕ್ಕದ ಮನೆಯಲ್ಲಿ ಖಾರಾ, ಚಕ್ಕಲಿ ತಯಾರಿಸಲು ಹೋಗಿದ್ದ. ಇದೇ ಸಂದರ್ಭದಲ್ಲಿ ಒಳ ಕಳ್ಳರು ಒಳ ನುಗ್ಗಿ ಕಳವು ಮಾಡಿದ್ದಾರೆ. ಮಂಜುನಾಥ ನೀಡಿದ ದೂರಿನಂತೆ ಗಾಂಧಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು