ಮಂಗಳವಾರ, ಜೂನ್ 22, 2021
23 °C

ನಿಯಮ ಉಲ್ಲಂಘಿಸಿ ಮದುವೆ: ವೈದ್ಯೆ ವಧು–ವರ ಸೇರಿ ಐವರ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ವಿವಾಹ ನಿಷೇಧ ಆದೇಶ ಉಲ್ಲಂಘಿಸಿ ಮದುವೆ ನೆರವೇರಿಸಿದ ಆರೋಪದ ಮೇಲೆ ವೈದ್ಯೆ ವಧು ಮತ್ತು ವರ ಸೇರಿ ಐವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ನಿಲುವಂಜಿ ಗ್ರಾಮದ ವಧು, ವೈದ್ಯೆ ಡಾ. ಬಸವರಾಜೇಶ್ವರಿ (ಡಾ.ನಿಧಿ), ವರ ಎಚ್.ಬಿ. ಸಿದ್ದಪ್ಪ, ಎನ್.ಬಸವರಾಜ್, ಕಮಲಮ್ಮ, ಬಸವರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಶುಕ್ರವಾರ ಮದುವೆ ನಿಶ್ಚಯವಾಗಿತ್ತು. ಆದರೆ, ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಗುರುವಾರ ರಾತ್ರಿ 9ಕ್ಕೆ ನಿಲುವಂಜಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆದಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ 20ರಿಂದ 25 ಜನ ಸೇರಿ ಆರತಿ ಕಾರ್ಯಕ್ರಮ ನಡೆಸುತ್ತಿದ್ದರು. 

ಪ್ರಭಾರ ಕಂದಾಯ ನಿರೀಕ್ಷಕ ಎಚ್. ಹೊನ್ನಪ್ಪ, ಗ್ರಾಮ ಲೆಕ್ಕಾಧಿಕಾರಿ ಎಸ್.ಎಂ. ಚನ್ನಬಸಯ್ಯ, ಪಿಡಿಒ ಅಂಜಿನಪ್ಪ, ನೀರಗಂಟಿ ಕೊಟ್ರೇಶ್ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಬೆಣ್ಣಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಟಿ.ಅಂಜಿನಪ್ಪ ನೀಡಿದ ದೂರಿನ ಮೇರೆಗೆ ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.