ಮಂಗಳವಾರ, ಮಾರ್ಚ್ 2, 2021
29 °C

ಸಂಭ್ರಮದ ಸಿದ್ಧರಾಮೇಶ್ವರ ದೇವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಗದ್ಗುರು ಶಿವಯೋಗಿ ಸಿದ್ಧರಾಮೇಶ್ವರ ದೇವರ 57ನೇ ರಥೋತ್ಸವ ಸೋಮವಾರ ನಗರದ ವೆಂಕಾಭೋವಿ ಕಾಲೊನಿಯ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿತು.

ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿ ವರ್ಷದಂತೆ ಈ ಬಾರಿಯೂ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮಂಗಳವಾದ್ಯ, ಜಾನಪದ ಕಲಾಮೇಳಗಳು ಹಾಗೂ ಪೂರ್ಣಕುಂಭ ಮತ್ತು ಕಳಸಗಳೊಂದಿಗೆ ನಗರದ ರಾಜಬೀದಿಗಳಲ್ಲಿ ಸಿದ್ದರಾಮೇಶ್ವರ ದೇವರ ರಥೋತ್ಸವದೊಂದಿಗೆ ಶ್ರೀಗಳ ಭಾವಚಿತ್ರವನ್ನು ಆನೆ ಅಂಬಾರಿ ಮೇಲಿಟ್ಟು ಮೆರವಣಿಗೆ ಮಾಡಲಾಯಿತು.

ಮಳೆಯ ನಡುವೆಯೂ ಸಾವಿರಾರು ಭಕ್ತರು ಮತ್ತು ಕುಂಭಮೇಳದೊಂದಿಗೆ ಸಿದ್ದರಾಮೇಶ್ವರ ದೇವಸ್ಥಾನದಿಂದ ಆರಂಭವಾದ ರಥೋತ್ಸವ ಮಾಗನಹಳ್ಳಿ ರಸ್ತೆ, ಕೆ.ಆರ್. ರಸ್ತೆ, ಮುನ್ಸಿಪಾಲ್ ಜೂನಿಯರ್ ಕಾಲೇಜ್ ಮುಂಭಾಗ, ಕೆ.ಆರ್. ಮಾರ್ಕೇಟ್, ಚಾಮರಾಜಪೇಟೆ ವೃತ್ತ, ಮಂಡಿಪೇಟೆ, ಗಡಿಯಾರ ಕಂಬದ ಮುಖಾಂತರ ವಿಜಯಲಕ್ಷ್ಮೀ ರಸ್ತೆ ಚೌಕಿಪೇಟೆ, ಹಾಸಬಾವಿ ಸರ್ಕಲ್, ಕೆ.ಆರ್. ರಸ್ತೆಯ ಮೂಲಕ ಸಿದ್ದರಾಮೇಶ್ವರ ತಲುಪಿತು. ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ರಥೋತ್ಸವದಲ್ಲಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಭಗೀರಥ ಪೀಠದ ಪುರಷೋತ್ತಮಾನಂದ ಪುರಿ ಸ್ವಾಮೀಜಿ, ಮಾದಾರಚೆನ್ನಯ್ಯ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಸಮಗಾರ ಹರಳಯ್ಯ ಸ್ವಾಮೀಜಿಗಳು ಭಾಗವಹಿಸಿದ್ದರು.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್, ಭೋವಿ ನೌಕರರ ಸಂಘದ ಗೌರವ ಅಧ್ಯಕ್ಷ ಓದೋ ಗಂಗಪ್ಪ, ಅಧ್ಯಕ್ಷ ಕೆಇಬಿ ಮಹಾದೇವಪ್ಪ, ಮಾಜಿ ಅಧ್ಯಕ್ಷ ದ್ಯಾಮಣ್ಣ, ಭೋವಿ ವಿದ್ಯಾರ್ಥಿ ನಿಲಯದ ಅಧ್ಯಕ್ಷ ವಿ. ಗೋಪಾಲ್, ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷ ಬಿ.ಟಿ. ಸಿದ್ದಪ್ಪ, ಕಾರ್ಯಾಧ್ಯಕ್ಷ ಎಚ್. ಜಯಣ್ಣ, ಕಾರ್ಯದರ್ಶಿ ಸಿದ್ದರಾಮಪ್ಪ, ಭೋವಿ ಗುರುಪೀಠದ ಆಡಳಿತಾಧಿಕಾರಿ ಗೋವಿಂದಪ್ಪ ಗೌನಹಳ್ಳಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಚ್. ವೆಂಕಟೇಶ್, ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಆರ್. ಶ್ರೀನಿವಾಸ್, ಮುಖಂಡರಾದ ಆನಂದಪ್ಪ, ಬ್ಯಾಂಕ್ ರಾಮಣ್ಣ, ನಾರಾಯಣ್, ಶೇಖರಪ್ಪ, ಡಿ. ಶಿವಕುಮಾರ್, ಮೂರ್ತೇಪ್ಪ, ಕೇಶವಮೂರ್ತಿ, ಯುವ ಅಧ್ಯಕ್ಷ ನಾಗರಾಜ್, ಶಶಿಕುಮಾರ್, ಬಿ. ಪ್ರವೀಣ್, ಚನ್ನಪ್ಪ, ಬಸವರಾಜ್, ಹನುಮಂತಪ್ಪ, ಗುರಪ್ಪ, ಗೋವಿಂದ, ಮೌನೇಶ್, ವೀರೇಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.