ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ ಪಟ್ಟಣದಲ್ಲಿ 5.6 ಸೆಂ.ಮೀ ಮಳೆ

Published 16 ಮೇ 2024, 13:15 IST
Last Updated 16 ಮೇ 2024, 13:15 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣದಲ್ಲಿ ಬುಧವಾರ ಭಾರಿ ಪ್ರಮಾಣದ ಮಳೆಯಾಗಿದ್ದು, ಮಳೆ ಮಾಪನ ಕೇಂದ್ರದಲ್ಲಿ 5.6 ಸೆಂ.ಮೀ. ದಾಖಲಾಗಿದೆ. 

ಮಳೆ ಹಾಗೂ ಗಾಳಿಯ ರಭಸಕ್ಕೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಛಾವಣಿಯ ನಾಲ್ಕೈದು ತಗಡುಗಳು ಬುಧವಾರ ಹಾರಿ ಹೋಗಿವೆ. ಯಾವುದೇ ಅನಾಹುತ ಆಗಿಲ್ಲ. ಶೀಟ್‌ಗಳು ಹಾರಿಹೋಗಿದ್ದರಿಂದ ಬಸ್ ನಿಲ್ದಾಣ ಮಳೆಗೆ ಸೋರುವಂತಾಗಿದೆ. 

ಅಡಿಕೆ ತೋಟದವರು ನೀರಿಲ್ಲದೇ ಟ್ಯಾಂಕರ್ ಮೊರೆ ಹೋಗಿದ್ದರು. ಈಗ ಬಿದ್ದಿರುವ ಮಳೆಯಿಂದಾಗಿ ಟ್ಯಾಂಕರ್‌ಗಳಿಗೆ ವಿರಾಮ ನೀಡಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಈ ಭಾಗದ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT