ಭಾನುವಾರ, ನವೆಂಬರ್ 28, 2021
19 °C

ನಿರ್ಮಾಣ ಹಂತದಲ್ಲಿದ್ದ ಲಿಫ್ಟ್‌ ಗುಂಡಿಗೆ ಬಿದ್ದು ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸರಸ್ವತಿ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಲಿಫ್ಟ್‌ನ ಗುಂಡಿಗೆ ಮಗು ಬಿದ್ದು ಮೃತಪಟ್ಟಿದೆ.

ಎಲ್‌ಐಸಿ ಮ್ಯಾನೇಜರ್‌, ಸರಸ್ವತಿ ನಗರ  ‘ಎ’ ಬ್ಲಾಕ್‌ನ ಪ್ರಕಾಶ್‌ ನಾಯಕ್‌ ಡಿ.– ವೀಣಾ ದಂಪತಿಯ ಮಗ ಮೋಹಿತ್‌ (6) ಮೃತಪಟ್ಟವನು.

ಆಟವಾಡುತ್ತಾ ಹೊರಗೆ ಹೋಗಿದ್ದ ಮೋಹಿತ್‌ ನಾಪತ್ತೆಯಾಗಿದ್ದ. ಸ್ಥಳೀಯರೆಲ್ಲ ಸೇರಿ ಹುಡುಕಾಟ ನಡೆಸಿದ್ದರು. ಪಕ್ಕದಲ್ಲಿ ಅಮೃತ್‌ ನಾಯಕ್‌ ಎಂಬವರು ನಿರ್ಮಿಸುತ್ತಿದ್ದ ಮನೆಯ ಲಿಫ್ಟ್‌ನ ಗುಂಡಿಗೆ ಬಿದ್ದು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಲಿಫ್ಟ್‌ ಗುಂಡಿಗೆ ನೀರು ತುಂಬಿಸಿ ಅಡ್ಡಲಾಗಿ ಏನೂ ಇಡದೇ ಇದ್ದಿದ್ದರಿಂದ ಮಗು ಬಿದ್ದು ಮೃತಪಟ್ಟಿದೆ ಎಂದು ಪ್ರಕಾಶ್‌ ನಾಯಕ್‌ ನೀಡಿದ
ದೂರಿನಲ್ಲಿ ತಿಳಿಸಿದ್ದಾರೆ. ಕೆಟಿಜೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು