ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿ: ಯುವ ವಿಜ್ಞಾನಿ ಎನ್.ಎಂ. ಪ್ರತಾಪ್

Last Updated 23 ಡಿಸೆಂಬರ್ 2019, 10:35 IST
ಅಕ್ಷರ ಗಾತ್ರ

ದಾವಣಗೆರೆ: ವಿದ್ಯಾರ್ಥಿಗಳು ಅಂಕಗಳ ಹಿಂದೆ ಓಡಬೇಡಿ, ಹೆಚ್ಚಿನ ಅಂಕ ಪಡೆದು ಇನ್ನೊಬ್ಬರ ಕೈಕೆಳಗೆ ದುಡಿಯುವ ಬದಲು ನೀವೆ ಇನ್ನೊಬ್ಬರಿಗೆ ಕೆಲಸ ಕೊಡಬೇಕು ಎಂದು ಯುವ ವಿಜ್ಞಾನಿ ಎನ್.ಎಂ. ಪ್ರತಾಪ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಿದ್ಧಗಂಗಾ ಸಂಸ್ಥೆಯಲ್ಲಿ ಭಾನುವಾರ ನಡೆದ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿ, ‘ಬೇರೆ ದೇಶಗಳಿಗೆ ಹೋಗಿ ವಿದ್ಯಾಭ್ಯಾಸ, ತಂತ್ರಜ್ಞಾನ ಕಲಿತುಕೊಂಡು ಬನ್ನಿ. ಆದರೆ ನಮ್ಮ ದೇಶದಲ್ಲಿ ಸೇವೆ ಮಾಡಿ, ಸ್ಟಾರ್ಟ್‌ ಅಪ್ ಆರಂಭಿಸಿ ಇತರರಿಗೆ ಕೆಲಸ ಕೊಡಿ. ಬಡವರಿಗೆ ಅಸಾಯಕರಿಗೆ ನೆರವು ನೀಡಿ’ ಎಂದು ಸಲಹೆ ನೀಡಿದರು.

‘ಡ್ರೋನ್‌ನಲ್ಲಿ ಹಲವು ಉಪಯೋಗಗಳಿದ್ದು, ಅದನ್ನು ಸಮರ್ಪಕವಾಗಿ ಬೆಳೆಸಿಕೊಳ್ಳಬೇಕು. ಮನುಷ್ಯರು ಸಂಕಷ್ಟದಲ್ಲಿದ್ದಾಗ ಔಷಧ, ಅಂಗಾಂಗಗಳನ್ನು ಶೀಘ್ರವಾಗಿ ಸಾಗಿಸಿ ಮನುಷ್ಯರ ಜೀವ ಉಳಿಸಬಹುದು ಎಂದು ಹೇಳಿದ ಪ್ರತಾಪ್ ವಿದೇಶದಲ್ಲಿ ಡ್ರೋನ್‌ನಿಂದ ಬಾಲಕಿಯ ಪ್ರಾಣ ಉಳಿಸಿದ ಬಗ್ಗೆ ವಿವರಿಸಿದರು.

‘ಸೋಲುಗಳು, ಅವಮಾನಗಳು ನಿಮ್ಮ ಕಣ್ಣ ಮುಂದೆ ಬಂದರೂ ಧೃತಿಗೆಡಬೇಡಿ. ಸೋಲುವುದು ತಪ್ಪಲ್ಲ. ನಾನೂ ಸೋತಿದ್ದೇನೆ. ನೀವು 99 ಬಾರಿ ಸೋತರೂ ಒಮ್ಮೆ ಗೆಲ್ಲುತ್ತೀರಿ. ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ. ಪ್ರಯತ್ನ ಪಡದೇ ಏನು ಸಾಧನೆ ಮಾಡಲು ಸಾಧ್ಯವಿಲ್ಲ. ನೀವು ಯಾವ ಕ್ಷೇತ್ರದಲ್ಲಾದರೂ ಕೆಲಸ ಮಾಡಿ, ದೇಶದ ಆರ್ಥಿಕ ಸಮಗ್ರ ಬೆಳವಣಿಗೆಗೆ ಕಾಣಿಕೆ ನೀಡಿ’ ಎಂದು ಸಲಹೆ ನೀಡಿದರು.

‘ನಾನು ಹಳ್ಳಿಯ ಬಡ ರೈತನ ಮಗ, ಏನಾದರೂ ಸಾಧಿಸಬೇಕು ಎಂಬ ಛಲ ಬಂತು. ಜಮೀನಿನಲ್ಲಿ ಕುಳಿತಿದ್ದ ವೇಳೆ ಹದ್ದು ಹಾರುವುದನ್ನು ವೀಕ್ಷಿಸಿದೆ. ಇದೇ ಡ್ರೋನ್ ಕಂಡುಹಿಡಿಯಲು ಇದೇ ನನಗೆ ಪ್ರೇರಣೆ ನೀಡಿತು. ಅವಕಾಶಗಳು ಬಂದಾಗ ಅದನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ಸಿದ್ಧಗಂಗಾ ವಿದ್ಯಾಸಂಸ್ಥೆಯ ಮಕ್ಕಳು ರ‍್ಯಾಂಕ್ ಪಡೆಯುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂದೆ ಇದ್ದಾರೆ. ಶಿವಣ್ಣನವರು ಆರಂಭದಲ್ಲಿ ಸಣ್ಣದಾಗಿ ಆರಂಭಿಸಿ ಅನೇಕ ಕಷ್ಟಗಳನ್ನು ಅನುಭವಿಸಿದರು. ಮಕ್ಕಳು ಚೆನ್ನಾಗಿ ಓದಿ ಶಾಲೆಗೆ ಕೀರ್ತಿ ತರಬೇಕು’ ಎಂದು ಸಲಹೆ ನೀಡಿದರು.

ಉದ್ಯಮಿ ಅಥಣಿ ವೀರಣ್ಣ ಮಾತನಾಡಿದರು. ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಡಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಕಾರ್ಯದರ್ಶಿ ಎಂ.ಎಸ್‌.ಶಿವಣ್ಣ, ಬಳ್ಳಾರಿಯ ಯುವ ಉದ್ಯಮಿ ಚಂದ್ರಶೇಖರ್‌ ಗೌಡ, ಎಲ್ ಅಂಡ್ ಟಿ ಟೆಕ್ನಾಲಜಿ ಸರ್ವೀಸ್‌ನ ಸೀನಿಯರ್ ಎಂಜಿನಿಯರ್ ಷಾ. ಆಲಂಖಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT