ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ ನಿರ್ದೇಶಕನಿಂದ ಕೊರೊನಾ ಜಾಗೃತಿ

Last Updated 9 ಜೂನ್ 2021, 15:05 IST
ಅಕ್ಷರ ಗಾತ್ರ

ದಾವಣಗೆರೆ:ಸಹ ನಿರ್ದೇಶಕ ರಾಕಿ ಸೋಮ್ಲಿ ಅವರು ಬುಧವಾರ ಕೊರೊನಾ ವೇಷ ಧರಿಸಿ ವಿವಿಧೆಡೆ ಜಾಗೃತಿ ಮೂಡಿಸಿದರು.

ಬೆಳಿಗ್ಗೆ 6.30ಕ್ಕೆ ಫೋಮ್ ಶೀಟ್‌ ಬಳಸಿ ತಯಾರಿಸಿದ ಹಸಿರು ಬಣ್ಣದ ಕೊರೊನಾ ವೇಷ ಧರಿಸಿಕೊಂಡು ನಗರದ ಜನನಿಬಿಡ ಪ್ರದೇಶಗಳಲ್ಲಿ ಪ್ರತ್ಯಕ್ಷರಾದರು.ಹಸಿರು ಬಣ್ಣದ ಉಡುಗೆ, ವೈರಸ್‌ನ ಭಯಂಕರ ರೂಪವನ್ನುನೋಡಿದ ಕೆಲವರು ದೂರ ಓಡಿದರು. ಕೆಲವರು ಮಾಸ್ಕ್ ಧರಿಸಿದ್ದು ಕಂಡುಬಂದಿತು. ಮತ್ತೆ ಕೆಲವರು ಸೆಲ್ಫಿ ಕೂಡಾ ತೆಗೆದುಕೊಂಡರು.

ಎಪಿಎಂಸಿ ತರಕಾರಿ ಮಾರುಕಟ್ಟೆ, ಗಡಿಯಾರ ಕಂಬ, ಚಾಮರಾಜಪೇಟೆ, ಎಂ.ಜಿ.ರಸ್ತೆ, ಬೆಳ್ಳೂಡಿ ಗಲ್ಲಿಗಳಲ್ಲಿ ಸಂಚರಿಸಿದರು. ‘ಮಾಸ್ಕ್ ಹಾಕಿಕೊಳ್ಳಿ, ಅಂತರ ಕಾಪಾಡಿಕೊಳ್ಳಿ. ಇಲ್ಲದಿದ್ದರೆ ನಾನು ನಿಮ್ಮನ್ನು ಆವರಿಸಿಕೊಳ್ಳುವೆ’ ಎಂದು ಹೇಳಿದರು. ಶೇಖರಪ್ಪ ನಗರದಲ್ಲಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಿದರು.

ಹಣ್ಣು ಮಾರುವವರು, ತರಕಾರಿ ವ್ಯಾಪಾರದ ತಳ್ಳುಗಾಡಿಗಳ ಬಳಿ ಜನರು ಮುತ್ತಿಕೊಂಡಿರುವುದನ್ನು ಗಮನಿಸಿ ಅವರಿಗೂ ಸಂದೇಶ ನೀಡಿದರು. ‘ಲಾಕ್‌ಡೌನ್ ಮುಗಿಯುತ್ತಿರಬಹುದು, ಆದರೆ ಕೊರೊನಾ ಹೋಯಿತೆಂದು ಮೈಮರೆಯಬೇಡಿ’ ಎಂದು ಎಚ್ಚರಿಸಿದರು.

ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ರಾಕಿ ಸೋಮ್ಲಿ ಅವರ ಗೀತ ರಚನೆಕಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಸಲಗ ಚಿತ್ರಕ್ಕೂ ಒಂದು ಹಾಡು ಬರೆದಿದ್ದಾರೆ.ಲಾಕ್‌ಡೌನ್ ಕಾರಣಕ್ಕೆ ದಾವಣಗೆರೆಗೆ ಬಂದಿರುವ ರಾಕಿ, ಸ್ನೇಹಿತರ ಜತೆಗೂಡಿ ಕೆಲ ದಿನಗಳಿಂದ ಸಂತ್ರಸ್ತರಿಗೆ ಆಹಾರದ ಕಿಟ್‌ಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ.

ಹೆದ್ದಾರಿಯಲ್ಲಿ ಬರುವ ಲಾರಿ ಚಾಲಕರಿಗೆ, ನಿರಾಶ್ರಿತರಿಗೆ, ಚಿಗಟೇರಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದರ ಜೊತೆಗೆ ದಾವಣಗೆರೆಯ ಜನರಿಗೆ ಜಾಗೃತಿ ಮೂಡಿಸಲು ಈ ವಿನೂತನ ಪ್ರಯತ್ನ ಮಾಡಿದರು.

‘ಜನರು ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೇ ತಿರುಗಾಡುವುನ್ನು ನೋಡಿದಾಗ ಜಾಗೃತಿ ಮೂಡಿಸುವ ಆಲೋಚನೆ ಹೊಳೆಯಿತು.ಸುಮ್ಮನೆ ಹೇಳಿದರೆ ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಈ ವೇಷವನ್ನು ಸಿದ್ಧಪಡಿಸಿದೆ’ ಎಂದು ರಾಕಿ ಸೋಮ್ಲಿ ಹೇಳಿದರು.

‘ಫೋಮ್ ಶೀಟ್ ಬಳಸಿ 10 ಕೆ.ಜಿ. ತೂಕದಲ್ಲಿ ಕಲಾವಿದ ಗೆಳೆಯ ಮುತ್ತು ಅವರು ಈ ವಿನ್ಯಾಸ ಮಾಡಲು ಸಹಕರಿಸಿದರು. ಈ ವೇಷವನ್ನು ವಿನ್ಯಾಸಗೊಳಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT