ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮದುವೆಯಲ್ಲಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ

ಫಾಲೋ ಮಾಡಿ
Comments

ದಾವಣಗೆರೆ: ಬಾಳಸಂಗಾತಿಗಳಾಗುವ ಮದುವೆ ಎಂಬ ಸಂಭ್ರಮದಲ್ಲಿ ಕೊರೊನಾ ವಾರಿಯರ್‌ಗಳಿಗೆ ಸನ್ಮಾನ ಮಾಡುವ ಮೂಲಕ ಕಾರ್ಯಕ್ರಮವನ್ನು ನವಜೋಡಿಯು ಸ್ಮರಣೀಯಗೊಳಿಸಿದ್ದಾರೆ.

ಮೌನೇಶ್ವರಿ ಬಡಾವಣೆಯ ನಿವಾಸಿ ಶಿಲ್ಪಿ ಸೋಮೇಶ್–ಕಲಾವತಿ ದಂಪತಿಯ ಮಗಳು ನಿಯತಿ (ಸಹನ) ಮತ್ತು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಜಗದೀಶ–ಮೀನಾವತಿ ದಂಪತಿಯ ಮಗ ವೀರೇಶ್‌ ಅವರ ಮದುವೆಯನ್ನು ವಧುವಿನ ಕಡೆಯವರು ಗುಂಡಿ ಮಹಾದೇವಪ್ಪ ಚೌಟ್ರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ನೆಂಟರು, ಸ್ನೇಹಿತರು ಸಡಗರದಿಂದ ಓಡಾಡುವ ಈ ಕಾರ್ಯಕ್ರಮದಲ್ಲಿ 21 ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಮಾಡಲಾಯಿತು. ಅದಕ್ಕೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕಬಿರಾನಾಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಮಾದಾರ ಚನ್ನಯ ಸಂಸ್ಥಾನದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಶಾಸಕ ಟಿ. ರಘುಮೂರ್ತಿ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT