ಭಾನುವಾರ, ಮಾರ್ಚ್ 29, 2020
19 °C
ಜಿಲ್ಲೆಯಲ್ಲಿ ಯಾರಿಗೂ ಕೊರೊನಾ ವೈರಸ್‌ ಇಲ್ಲ

ಕೊರೊನಾ ವೈರಸ್‌: 8 ಮಾದರಿ ನೆಗೆಟಿವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ವೈರಸ್ ಸಂಬಂಧ ಪರೀಕ್ಷೆಗೆ ಕಳುಹಿಸಿದ್ದ 18 ಮಾದರಿಗಳಲ್ಲಿ 8ರ ಫಲಿತಾಂಶ ನೆಗೆಟಿವ್ ಬಂದಿದ್ದು, ಈವರೆಗೆ ಯಾರಲ್ಲೂ ಕೋವಿಡ್‌–19 ಸೋಂಕು ಇಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

‘ಈವರೆಗೆ 194 ಜನರು ಜಿಲ್ಲೆಯಿಂದ ವಿದೇಶ ಪ್ರಯಾಣ ಮಾಡಿ ಬಂದಿದ್ದು, ಭಾನುವಾರ ಹೊಸದಾಗಿ 28 ಮಂದಿಯನ್ನು ಅವಲೋಕನೆಗಾಗಿ ಪಟ್ಟಿ ಮಾಡಲಾಗಿದೆ. ಒಬ್ಬರು 28 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 16 ಜನರು 14 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ’ ಎಂದು ತಿಳಿಸಿದರು.

‘ಭಾನುವಾರ ಹೊಸದಾಗಿ 25 ಮಂದಿಯನ್ನು ಮನೆಯಲ್ಲೂ ಹಾಗೂ 3 ಮಂದಿಯನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಒಟ್ಟು 178 ಜನರನ್ನು ಮನೆಯಲ್ಲೂ ಹಾಗೂ 14 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ವಿದೇಶಗಳಿಗೆ ಭೇಟಿ ನೀಡಿ ಜಿಲ್ಲೆಗೆ ಬಂದು ಇತರೆ ಜಿಲ್ಲೆಗಳಿಗೆ ಇದುವರೆಗೆ 7 ಜನ ತೆರಳಿದ್ದಾರೆ’ ಎಂದರು.

‘ಕೊವಿಡ್-19 ಪೀಡಿತ ಪ್ರದೇಶಗಳಿಂದ ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರೂ ಭಾರತಕ್ಕೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ, ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿ ಇರಬೇಕು. ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ಭಾನುವಾರದವೆರೆಗೆ ವಿದೇಶದಿಂದ ಜಿಲ್ಲೆಗೆ ಬಂದವರು

ಅಮೆರಿಕ→13

ಆಸ್ಟ್ರೇಲಿಯ→14

ಥೈಲ್ಯಾಂಡ್, ಬ್ಯಾಂಗಾಕ್→14

ಚೈನಾ→1

ಯುಎಇ→1

ಜಪಾನ್→2

ಮಲೇಷ್ಯಾ→7

ಲಂಡನ್–12

ಓಮನ್→10

ನೇಪಾಳ್→2

ಸಿಂಗಪುರ್→6

ಸೌದಿ ಅರೇಬಿಯ→30

ಇಟಲಿ→1

ಶ್ರೀಲಂಕಾ→21

ದಕ್ಷಿಣ ಆಫ್ರಿಕಾ→3

ಜರ್ಮನಿ→2

ಕೆನಡಾ→1

ಫ್ರಾನ್ಸ್→1

ಮಾರಿಷಸ್‌→2

ಎಪಿಲಿಂಕ್‌ ಕೇಸ್→1

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು