ಮಂಗಳವಾರ, ಮಾರ್ಚ್ 31, 2020
19 °C

‘ದೇಶದಲ್ಲಿ ಕಾಡುತ್ತಿವೆ ಕೊರೋನಾ, ಎನ್ಆರ್‌ಸಿ, ಸಿಎಎ ವೈರಸ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದೇಶದಲ್ಲಿ ಎರಡು ರೀತಿಯ ವೈರಸ್‌ಗಳು ಕಾಡುತ್ತಿವೆ. ಒಂದು ಕೊರೋನಾ ಇನ್ನೊಂದು ಎನ್ಆರ್‌ಸಿ, ಸಿಎಎ ವೈರಸ್ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದರು.

ಇಲ್ಲಿ ನಡೆದ ಭಾರತ್‌ ಬಚಾವೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಎರಡು ವೈರೆಸ್ ನಿಂದ ಖಜಾನೆ ಖಾಲಿಯಾಗಿ ಷೇರು ಪೇಟೆ ಮುಳುಗಿ ಹೋಗಿವೆ. ಗೃಹ ಸಚಿವ ಅಮಿತ್ ಶಾ ನಿನ್ನೆ ರಾಜ್ಯಸಭೆಯಲ್ಲಿ ಪೌರತ್ವದ ಬಗ್ಗೆ ಒಂದು ಹೆಜ್ಜೆ ಕೆಳಗೆ ಇಳಿದಿದ್ದಾರೆ. ಪೌರತ್ವಕ್ಕೆ ಈಗ ಪತ್ರ ತೋರಿಸಬೇಕಿಲ್ಲ, ಎಲ್ಲೂ ಅಡ್ಡಿ ಮಾಡೋಲ್ಲ ಎಂದಿದ್ದಾರೆ. ಇಷ್ಟು ‌ದಿನ ಬೇಕಿತ್ತಾ ಇದನ್ನು ಮಾಡೋಕೆ’ ಎಂದು ಪ್ರಶ್ನಿಸಿದರು.

‘ದೇಶದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿ ನಂತರ ಕಾನೂನು ಜಾರಿಮಾಡಬೇಕು. ಎನ್ಆರ್‌ಸಿ ಕಾನೂನು ಜಾರಿ ಮಾಡುತ್ತೇವೆ ಎಂದು ಹೇಳಿದವರು ಈಗ ಕೆಳಗೆ ಇಳಿಯುವ ಮಾತನಾಡುತ್ತಿದ್ದಾರೆ. ರಾಜ್ಯ ಸಭೆಯಲ್ಲಿ ಹೇಳಿದರೆ ಸಾಲದು ಅದನ್ನು ಲಿಖಿತ ರೂಪದಲ್ಲಿ ಹೊರಡಿಸಬೇಕು. ಇದರ ಬಗ್ಗೆ ಮೋದಿಯವರು ಒಳ್ಳೆ‌ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ’ ಎಂದರು.

ಕೋವಿಡ್‌ 19 ನಿಯಂತ್ರಣಕ್ಕೆ ಜಿಲ್ಲೆಗಳಲ್ಲಿ ಆಧುನಿಕ ತಪಾಸಣೆ ಇರಬೇಕು. ಕಟ್ಟುನಿಟ್ಟಿನ ಕ್ರಮಕ್ಕೆ ಶ್ವೇತ ಪತ್ರ ಹೊರಡಿಸಬೇಕು. ಇದನ್ನು ರಾಜ್ಯ ಸರ್ಕಾರ ಮೊದಲೇ ಮಾಡಬೇಕಿತ್ತು ಎಂದರು.

ಮಧ್ಯಪ್ರದೇಶದಿಂದ 20 ಜನ ದೇವದಾಸಿಯರನ್ನು ಕರೆ ತಂದಿದ್ದಾರೆ.. ಸರ್ಕಾರ ಅವರನ್ನು ನೋಡಿಕೊಳ್ಳುವುದರಲ್ಲಿ ಬಿಜಿ ಇದೆ. ಆ ದೇವದಾಸಿಯರಿಗೆ ಮೊದಲು ಕೊರೋನಾ ಟೆಸ್ಟ್ ಮಾಡಿಸಲಿ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ನಲ್ಲಿ ಇಟ್ಟಿದ್ದಕ್ಕೆ ವ್ಯಂಗ್ಯವಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು