ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು: ಪೊಲೀಸ್ ಭದ್ರತೆ ನಡುವೆ ಲಸಿಕಾ ಅಭಿಯಾನ

Last Updated 29 ನವೆಂಬರ್ 2021, 4:14 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪಟ್ಟಣದಲ್ಲಿ ಈವರೆಗೂ ಕೊರೊನಾ ಲಸಿಕೆ ಪಡೆಯದ ನಾಗರಿಕರಿಗೆ ಭಾನುವಾರ ವಿಶೇಷ ಲಸಿಕಾ ಅಭಿಯಾನ ನಡೆಸಿ ಲಸಿಕೆ ಹಾಕಿದರು.

ಲಸಿಕೆ ಪಡೆದರೆ ಆರೋಗ್ಯ ಕೆಟ್ಟು ಜೀವಹಾನಿ ಆಗುತ್ತದೆ ಎಂದು ನಾಗರಿಕರೊಬ್ಬರು ಲಸಿಕೆ ಪಡೆಯಲು ನಿರಾಕರಿಸಿದಾಗ, ಅಧಿಕಾರಿಗಳು ಪೊಲೀಸ್ ಕರೆಸಿ ಲಸಿಕೆ ಹಾಕಿದ ಘಟನೆ ನಡೆಯಿತು.

‘ಒಂದೆರಡು ಬಡಾವಣೆಯಲ್ಲಿ ನಾಗರಿಕರು ಲಸಿಕೆ ಹಾಕಿಸಿಕೊಳ್ಳುದೇ ಇರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಒಂದು ವೇಳೆ ಆರೋಗ್ಯದಲ್ಲಿ ಏರುಪೇರಾದರೆ ನೀವೇ ಹೊಣೆಗಾರರು’ ಎಂದು ಎಚ್ಚರಿಕೆ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರದ ಕರ್ತವ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮೀದೇವಿ ನಾಗರಿಕರಿಗೆ ಸಮಾಧಾನ ಹೇಳಿ ಅನುಮಾನಗಳಿಗೆ ಉತ್ತರಿಸಿದರು. ಲಸಿಕೆ ಪಡೆಯದಿದ್ದರೆ ಆಗುವ ತೊಂದರೆಗಳ ಬಗ್ಗೆ ವಿವರಿಸಿದರು.

ಲಸಿಕೆ ಪಡೆದ ದಾಖಲಾತಿ ಇದ್ದರೆ ಸರ್ಕಾರಿ ಸೌಲಭ್ಯ ಪಡೆಯಬಹುದು. ಪರಸ್ಥಳಕ್ಕೆ ಹೋದ ವೇಳೆ ಬೇಕಾಗುತ್ತದೆ ಎಂಬುದನ್ನು ಮನದಟ್ಟು ಮಾಡಿದರು.

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಉಪತಹಶೀಲ್ದಾರ್ ಆರ್. ರವಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಗಣೇಶ್ ರಾವ್, ಆರೋಗ್ಯ ನಿರೀಕ್ಷಕ ನವೀನ್, ಸಮುದಾಯ ಸಂಘಟನಾಧಿಕಾರಿ ದಿನಕರ್, ಪರಿಸರ ಎಂಜಿನಿಯರ್ ಉಮೇಶ್, ವಿಎ ಕೊಟ್ರೇಶ್, ಕಂದಾಯ ನಿರೀಕ್ಷಕ ಆನಂದ್, ಪಿಎಸ್ಐ ರವಿಕುಮಾರ್, ಶಿಕ್ಷಕರಾದ ಕರಿಬಸಪ್ಪ, ದಂಡಿ ತಿಪ್ಪೇಸ್ವಾಮಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT