ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಲದ ಬಾಧೆ; ರೈತ ಆತ್ಮಹತ್ಯೆ

Published : 14 ಸೆಪ್ಟೆಂಬರ್ 2024, 15:45 IST
Last Updated : 14 ಸೆಪ್ಟೆಂಬರ್ 2024, 15:45 IST
ಫಾಲೋ ಮಾಡಿ
Comments

ಮಲ್ಲಿಗೇನಹಳ್ಳಿ (ನ್ಯಾಮತಿ): ಜಮೀನು ಕೆಲಸಕ್ಕಾಗಿ ಮಾಡಿದ ಸಾಲ ತೀರಿಸಲು ಆಗದೆ ಮನನೊಂದ ಗ್ರಾಮದ ರೈತ ಕುಬೇರಪ್ಪ (55) ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.

ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋದವರು ವಾಪಸ್ ಬಂದಿರಲಿಲ್ಲ. ಶನಿವಾರ ಇಸ್ಲಾಪುರ ಗಡಿಭಾಗದಲ್ಲಿರುವ ಬಾಳೆಕಟ್ಟೆ ಕೆರೆಯಲ್ಲಿ ಕುಬೇರಪ್ಪ ಅವರ ಶವ ಪತ್ತೆಯಾಗಿದೆ.

‘ಮಾವನವರು ಜಮೀನು ಕೆಲಸಕ್ಕಾಗಿ ಬ್ಯಾಂಕ್, ಧರ್ಮಸ್ಥಳ ಹಾಗೂ ಸ್ವಸಹಾಯ ಸಂಘಗಳಲ್ಲಿ ₹ 12 ಲಕ್ಷ ಸಾಲ ಮಾಡಿದ್ದರು. ಅದನ್ನು ತೀರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಅಳಿಯ ನ್ಯಾಮತಿ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT