ಉಚ್ಚಂಗಿದುರ್ಗ: ಅರಸೀಕೆರೆ ಗ್ರಾಮದ ಐತಿಹಾಸಿಕ ದಂಡಿ ದುರ್ಗಮ್ಮ ದೇವಿಯ ಕಾರ್ತಿಕೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಮಾಜಿ ಶಾಸಕ ಎಚ್.ಪಿ. ರಾಜೇಶ್ ಮೂರು ದಿನಗಳ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು.

ಕಾರ್ತಿಕೋತ್ಸವದ ಅಂಗವಾಗಿ ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಕೊಪ್ಪಳ ಜಿಲ್ಲೆಯ ಸಾವಿರಾರು ಭಕ್ತರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು.

ಸುತ್ತ ಮುತ್ತಲಿನ ಕುರುಗಾಹಿಗಳು, ರೈತರು ಕುರುಹಾಕಿದ ಮೊದಲ ಗಿಣ್ಣದ ಹಾಲು, ಹಾಲು, ಮಡಿಯಲ್ಲಿ ತಯಾರಿಸಿದ ತುಪ್ಪ, ಬೆಣ್ಣೆಯನ್ನು ದೇವಿಗೆ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಸಾವಿರಾರು ಜನ ಭಕ್ತರು ಸೇರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಹರಪನಹಳ್ಳಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಇಬ್ಬರು ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್–7, ಸಹಾಯಕ ಇನ್‌ಸ್ಪೆಕ್ಟರ್–12, ಎಚ್.ಸಿ– 26, ಕಾನ್‌ಸ್ಟೆಬಲ್– 52, ಮಹಿಳಾ ಸಿಬ್ಬಂದಿ–17, ಹೋಮ್ ಗಾರ್ಡ್– 35, ಇಬ್ಬರು ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಟ್ರಾಫಿಕ್ ಸಮಸ್ಯೆ ಆಗದಂತೆ 10 ಟ್ರಾಫಿಕ್ ಸಿಬ್ಬಂದಿ, 100 ಬ್ಯಾರಿಕೇಡ್ ಹಾಕಲಾಗಿದೆ. ಗ್ರಾಮದ 10 ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ.

ಮಾರ್ಗ ಬದಲಾವಣೆ:

ಹರಪನಹಳ್ಳಿ ಹಾಗೂ ದಾವಣಗೆರೆ ಕಡೆಗಳಿಂದ ಬರುವ ಭಕ್ತರಿಗೆ ಪ್ರತ್ಯೇಕ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ. ಭಾರೀ ಗಾತ್ರದ ವಾಹನ ಸಂಚರಿಸಲು ಮಾರ್ಗ ಬದಲಾಯಿಸಲಾಗಿದ್ದು, ದಾವಣಗೆರೆ ಕಡೆಗಳಿಂದ ಬರುವವರು ಯರಬಳ್ಳಿ, ಅಡವಿಮಲ್ಲಾಪುರ, ನಿಚ್ಚವನಹಳ್ಳಿ ಕ್ರಾಸ್ ಮೂಲಕ ಹರಪನಹಳ್ಳಿಗೆ ತಲುಪಬೇಕು. ಹರಪನಹಳ್ಳಿ ಕಡೆಯಿಂದ ಬರುವವರು ಕೆರೆಗುಡಿಹಳ್ಳಿ, ಹೊಸಕೋಟೆ, ಮಾದಿಹಳ್ಳಿ, ಕಮ್ಮತ್ತಹಳ್ಳಿ ಕ್ರಾಸ್ ಮೂಲಕ ದಾವಣಗೆರೆಗೆ ತಲಪುವಂತೆ ಮಾರ್ಗ ಬದಲಾಯಿಸಲಾಗಿದೆ ಎಂದು ಇನ್‌ಸ್ಪೆಕ್ಟರ್ ಕೆ.ಕುಮಾರ್ ‘ಪ್ರಜಾವಾಣಿ‘ ಗೆ ತಿಳಿಸಿದರು.

ಮುಖಂಡರಾದ ವೈ.ಡಿ. ಅಣ್ಣಪ್ಪ, ರಂಗನಾಥ್, ಪರಶುರಾಮಪ್ಪ, ಬಾಲೆನಹಳ್ಳಿ ಕೆಂಚನಗೌಡ, ಫಣಿಯಾಪುರ ಲಿಂಗರಾಜ, ಪೂಜಾರಿ ಮರಿಯಪ್ಪ, ವಿಶ್ವನಾಥಯ್ಯ, ಸಿದ್ದಪ್ಪ, ಬಸವರಾಜಪ್ಪ, ಶ್ರೀನಿವಾಸ ಇದ್ದರು.

ರಸಮಂಜರಿ ಕಾರ್ಯಕ್ರಮ:

ಕಾರ್ತಿಕೋತ್ಸವದ ಅಂಗವಾಗಿ ಮೆಗಾ ಮ್ಯೂಸಿಕಲ್ ನೈಟ್ ರಸಮಂಜರಿ ಕಾರ್ಯಕ್ರಮ ಡಿ.21 ರಂದು ರಾತ್ರಿ 7ಕ್ಕೆ ಆಯೋಜಿಸಲಾಗಿದೆ. ಸಂಸದ ಜಿ.ಎಂ. ಸಿದ್ದೇಶ್ವರ, ವೈ. ದೇವೇಂದ್ರಪ್ಪ, ಶಾಸಕರಾದ ಎಸ್.ವಿ. ರಾಮಚಂದ್ರ, ಎಂ.ಪಿ ರೇಣುಕಾಚಾರ್ಯ, ಜಿ. ಕರುಣಾಕರ ರೆಡ್ಡಿ, ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ, ಕಿರುತೆರೆ ನಟರು ಪಾಲ್ಗೊಳ್ಳಲಿದ್ದಾರೆ. ಡಿ.22 ರಂದು ಹೊಳೆ ಉತ್ಸವ, ದುರ್ಗಿಯರ ಊಟ ಕಾರ್ಯಕ್ರಮಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.