ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 12 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢ

Last Updated 12 ಮೇ 2020, 12:46 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 12 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ. ಅದರಲ್ಲಿ 6 ಮಂದಿ ಗುಜರಾತ್‌ನ ಅಹಮದಾಬಾದ್‌ನಿಂದ ಬಂದವರು.

ಅಹಮದಾಬಾದ್‌ನಿಂದ ಬಂದ ಎಲ್ಲ ಆರು ಮಂದಿ ಪುರುಷರಾಗಿದ್ದು, 18 ವರ್ಷ(ಪಿ.915), 23 ವರ್ಷ (916), 40 ವರ್ಷದ ಇಬ್ಬರು (ಪಿ. 917, 918),20 ವರ್ಷದ ಇಬ್ಬರು (ಪಿ.919, 920) ಸೇರಿದ್ದಾರೆ.

23 ವರ್ಷದ ಯುವಕ (ಪಿ.921) ಮತ್ತು 29 ವರ್ಷದ ಯುವಕ (ಪಿ.922) ಈ ಮೂವರಿಗೆ ಎಸ್‌ಪಿಎಸ್‌ ನಗರದ 53 ವರ್ಷದ ಮಹಿಳೆಯ (ಪಿ.695) ಸಂಪರ್ಕದಿಂದ ಸೋಂಕು ಬಂದಿದೆ.

17 ವರ್ಷದ ಯುವತಿ (ಪಿ.914), 45 ವರ್ಷದ ವ್ಯಕ್ತಿ (ಪಿ.923), 28 ವರ್ಷದ ಯುವಕ (ಪಿ.924) ಮತ್ತು 9 ವರ್ಷದ ಬಾಲಕಿ (ಪಿ. 925) ಈ ಮೂವರಿಗೆ ಜಾಲಿನಗರದ ಮಹಿಳೆಯ (ಪಿ. 696) ಸಂಪರ್ಕದಿಂದ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಈವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 83ಕ್ಕೆ ಏರಿದೆ. ಅದರಲ್ಲಿ ಇಬ್ಬರು ಗುಣಮುಖರಾಗಿದ್ದರೆ, ನಾಲ್ವರು ಮೃತಪಟ್ಟಿದ್ದಾರೆ. ಸದ್ಯ 77 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT