ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಪೂಜಿ ಬ್ಯಾಂಕಿಗೆ ₹ 5.97 ಕೋಟಿ ನಿವ್ವಳ ಲಾಭ: ಶಾಮನೂರು ಶಿವಶಂಕರಪ್ಪ

ಶಾಸಕ ಶಾಮನೂರು ಶಿವಶಂಕರಪ್ಪ
Last Updated 22 ನವೆಂಬರ್ 2021, 4:31 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್‍ನಿಂದಾಗಿ ಜಾಗತಿಕ ಆರ್ಥಿಕ ಹಿಂಜರಿಕೆ ಇದ್ದರೂ ಬಾಪೂಜಿ ಕೋ ಆಪರೇಟಿವ್ ಬ್ಯಾಂಕ್‌ 2020-21ನೇ ಆರ್ಥಿಕ ವರ್ಷದಲ್ಲಿ ₹ 5.97 ಕೋಟಿ ನಿವ್ವಳ ಲಾಭಗಳಿಸಿ ಪ್ರಗತಿ ಪಥದಲ್ಲಿದೆ ಎಂದು ಬ್ಯಾಂಕ್‌ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ವರ್ಚುವಲ್ ವಿಧಾನದಲ್ಲಿ ನಡೆದ ಬ್ಯಾಂಕಿನ 52ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕಿನ ಲೆಕ್ಕ ತಖ್ತೆಗಳೆಲ್ಲ ಪಾರದರ್ಶಕವಾಗಿದೆ. ಆದಾಯ ತೆರಿಗೆ ಸಲ್ಲಿಸಿದ ನಂತರದ ನಿವ್ವಳ ಲಾಭದಲ್ಲಿ ಶೇ 18ರ ಪ್ರಮಾಣದ ಲಾಭಾಂಶ ಅಂದರೆ ಡಿವಿಡೆಂಡ್ ಕೊಡಲಾಗುತ್ತಿದೆ. ನಿಧನರಾಗಿರುವ ಬ್ಯಾಂಕಿನ ಸದಸ್ಯರ ಕುಟುಂಬಕ್ಕೆ ₹ 10 ಸಾವಿರ ಪರಿಹಾರ ನಿಧಿ ಮೊತ್ತವನ್ನೂ ಏರಿಸುವ ಅಂದಾಜಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ, ನಿರ್ದೇಶಕರಾದ ಡಾ.ಎಂ.ಜಿ. ಈಶ್ವರಪ್ಪ, ಡಾ.ಬಿ.ಎಸ್. ರೆಡ್ಡಿ, ಡಾ. ಶಂಷದ್ ಬೇಗಂ, ಡಾ. ಬಿ.ಪೂರ್ಣಿಮಾ, ಡಾ. ಕೆ. ಹನುಮಂತಪ್ಪ, ಡಾ. ಎಚ್. ಶಿವಪ್ಪ, ಡಾ.ಎ. ಅರುಣಕುಮಾರ್, ಡಾ.ಸಿ.ವೈ. ಸಂದರ್ಶನ್, ಡಾ.ಎಂ.ಎಂ. ಲಿಂಗರಾಜ, ಕೆ.ಬೊಮ್ಮಣ್ಣ, ಕೆ.ಎಸ್. ವೀರೇಶ್, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಿ.ವಿ. ಶಂಕರ್, ವ್ಯವಸ್ಥಾಪಕರಾದ ಜಿ.ಒ. ಶಂಕರಪ್ಪ, ಬಿ.ಜಿ. ಬಸವರಾಜಪ್ಪ, ಎಂ. ಬಸವರಾಜ್, ಶೋಭಾ ಪಾಟೀಲ್, ಕೆ.ಎಂ. ಲಿಂಗೇಶ್, ರವಿಶಂಕರ್ ಡಿ.ಜಿ., ಮಂಜುನಾಥ ಪಾಟೀಲ್, ಪ್ರಸನ್ನ ಎಂ. ಎಸ್., ರವೀಂದ್ರ ಸಿ.ಎಸ್. ಅವರೂ ಇದ್ದರು.

ಜಿ.ವಿ. ಶಿವಶಂಕರ್ ಕಾರ್ಯಕ್ರಮ ನಿರೂಪಿಸಿದರು.

ಸೌಮ್ಯ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಬ್ಯಾಂಕಿನ ನಿವೃತ್ತ ಸಿಬ್ಬಂದಿ ಕೊಟ್ರೇಶಿ ಎಂ., ಜಗದೀಶಪ್ಪ ಎಸ್., ಫಾಲಾಕ್ಷಪ್ಪ, ವೀರಬಸಪ್ಪ ವಿ.ಎಸ್., ಸತ್ಯಾನಂದ ಕೆ.ಆರ್. ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಸಹಕಾರ ಮಂಡಳದ ಸಹಕಾರಿ ಡಿಪ್ಲೊಮಾ ಉತ್ತೀರ್ಣತೆ ಹೊಂದಿದ ಬ್ಯಾಂಕಿನ ಸಿಬ್ಬಂದಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಕೆ.ಎಸ್. ವೀರೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT