ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊನ್ನಾಳಿ ‘ಶಿವ’ ಸೊಸೈಟಿ: ಶಿವಕುಮಾರ್ ಅಧ್ಯಕ್ಷ

Published 4 ಸೆಪ್ಟೆಂಬರ್ 2024, 14:10 IST
Last Updated 4 ಸೆಪ್ಟೆಂಬರ್ 2024, 14:10 IST
ಅಕ್ಷರ ಗಾತ್ರ

ಹೊನ್ನಾಳಿ: ಪಟ್ಟಣದ ಶಿವ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಕಮ್ಮಾರಗಟ್ಟೆಯ ಕೆ.ಎಸ್.ಶಿವಕುಮಾರ್, ಉಪಾಧ್ಯಕ್ಷರಾಗಿ ಕೂಲಂಬಿ ಬಸವರಾಜ್ ಅವಿರೋಧವಾಗಿ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷರಾಗಿದ್ದ ಎಂ.ಸತೀಶ್, ಉಪಾಧ್ಯಕ್ಷರಾಗಿದ್ದ ಜಿ.ಯಶೋಧಮ್ಮ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.

ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ನವೀನ್‌ಕುಮಾರ್ ಅವರು ಆಯ್ಕೆಯನ್ನು ಘೋಷಿಸಿದರು.

ಮಾಜಿ ಅಧ್ಯಕ್ಷ ಎಂ.ಸತೀಶ್, ಪಿ.ಬಿ.ಶೈಲೇಶ್, ಪಿ.ಚಂದ್ರಪ್ಪ, ನಿರ್ದೇಶಕರಾದ ಕೆ.ಜಿ.ಮಂಜುಳಾ, ಆರ್.ಸಿ.ಶಂಕರಗೌಡ, ಡಿ.ಜಿ.ಎನ್.ಚನ್ನವೀರಪ್ಪ, ಕೆ.ಜಿ.ಕರಿಬಸಪ್ಪ, ಬಿ.ಕೆಂಚಪ್ಪ, ಜಿ.ಯಶೋಧಮ್ಮ, ಎನ್.ಕೃಷ್ಣನಾಯ್ಕ, ಸಂಘದ ಕಾರ್ಯದರ್ಶಿ ಎಚ್.ಎನ್.ರುದ್ರೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT