ಸೋಮವಾರ, ಜುಲೈ 4, 2022
21 °C
31 ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆ

ಎರಡನೇ ದಿನ 1364 ಮಂದಿ ಗೈರು: ದ್ವಿತೀಯ ಪಿಯು ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆ 31 ಕೇಂದ್ರಗಳಲ್ಲಿ ಎರಡನೇ ದಿನವೂ ಸುಸೂತ್ರವಾಗಿ ನಡೆಯಿತು.

ಗಣಿತ ವಿಷಯದಲ್ಲಿ 8,473 ವಿದ್ಯಾರ್ಥಿಗಳು ನೊಂದಾಯಿಸಿದ್ದು, 7,260 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 1213 ವಿದ್ಯಾರ್ಥಿಗಳು ಗೈರಾಗಿದ್ದರು. ಶಿಕ್ಷಣ ವಿಷಯದಲ್ಲಿ ನೋಂದಾಯಿಸಿದ್ದ 802 ವಿದ್ಯಾರ್ಥಿಗಳಲ್ಲಿ 651 ಮಂದಿ ಪರೀಕ್ಷೆ ಬರೆದಿದ್ದು, 151 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

25 ಮುಸ್ಲಿಂ ವಿದ್ಯಾರ್ಥಿನಿಯರು ಗೈರು: ಎರಡನೇ ದಿವಸ ದಾವಣಗೆರೆಯಲ್ಲಿ 7, ಹರಿಹರದಲ್ಲಿ 9 ಮಲೇಬೆನ್ನೂರಿನಲ್ಲಿ 2 ಹಾಗೂ ಜಗಳೂರಿನ ಒಂದು ಸೇರಿ ಜಿಲ್ಲೆಯಲ್ಲಿ 25 ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗಿದ್ದರು. ಅನಾರೋಗ್ಯ ಹಾಗೂ ದೀರ್ಘ ಅವಧಿಗೆ ಗೈರು ಹಾಜರಾಗಿದ್ದುದರಿಂದ ಪರೀಕ್ಷೆಗೂ ಗೈರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು